ಮರಳು ಅಡ್ಡೆಗಳಿಗೆ ದಾಳಿ ; 4 ಲಾರಿ, 2 ದೋಣಿ ವಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಸುಳ್ಯ : ಭಸ್ಮಡ್ಕದ ಕುಂತಿನಡ್ಕ ಮತ್ತು ಕಾಂತಮಂಗಲ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಮಾಹಿತಿ ಪಡೆದ ಪುತ್ತೂರು ಸಹಾಯಕ ಕಮಿಷನರ್ ರಘುನಂದನ್ ಮೂರ್ತಿ ಮತ್ತು ಸುಳ್ಯ ಕಂದಾಯ ನಿರೀಕ್ಷಕರಾದ ಅವಿನ್ ರಂಗತ್‍ಮಲೆ ಹಾಗೂ ಸುಳ್ಯ ಪೆÇಲೀಸರ ತಂಡದವರು ದಾಳಿ ನಡೆಸಿ ನಾಲ್ಕು ಲಾರಿ, ಎರಡು ಬೋಟು, ಹಾರೆ, ಬಕೆಟ್ ಇತ್ಯಾದಿ ಸಲಕರಣೆಗಳನ್ನು ವಶಕ್ಕೆ ಪಡೆದರು.

ಕುಂತಿನಡ್ಕದಲ್ಲಿ ಧರ್ಮಪ್ರಕಾಶ್ ಹಾಗೂ ಹೇಮಪ್ರಕಾಶ್ ಎಂಬವರು ಹಲವು ಸಮಯಗಳಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದುದು ಸಹಾಯಕ ಕಮಿಷನರ್ ಅವರ ಗಮನಕ್ಕೆ ಬಂದಿತ್ತೆನ್ನಲಾಗಿದೆ. ನಿನ್ನೆ ಧಿಡೀರ್ ಧಾಳಿ ನಡೆಸಿದಾಗ ಆರೋಪಿಗಳು ಪರಾರಿಯಾದರೆನ್ನಲಾಗಿದೆ. ಅಲ್ಲಿದ್ದ ಮರಳು ಹಾಗೂ ಲಾರಿಗಳನ್ನು ಜಪ್ತಿ ಮಾಡಲಾಯಿತು.


ಜುಗಾರಿ ಆರೋಪಿ ಸೆರೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ಕರಾವಳಿ ಜಂಕ್ಷನ್ ಬಳಿ ಮಟ್ಕಾ ಜುಗಾರಿಗಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪಿಯನ್ನು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೊಡವೂರು ಗ್ರಾಮ ಮಧ್ವನಗರ ವೀಣಾ ಆಟ್ಸ್ ನಿವಾಸಿ ವಿಜಯ ಪ್ರಕಾಶ್ ಅಮೀನ್ (41) ಬಂಧಿತ ಆರೋಪಿ. ಬಂಧಿತನಿಂದ 1,670 ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.