ಪಾವಂಜೆ ನಂದಿನಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ : ಪಂಚಾಯತ್ ಮೌನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಹಳೆಯಂಗಡಿ ಸಮೀಪದ ಪಾವಂಜೆ ನಂದಿನಿ ನದಿ ಅರಂದ್ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದರೂ ಹಳೆಯಂಗಡಿ ಪಂಚಾಯತ್ ಯಾಕೆ ಮೌನ ವಹಿಸಿದೆ ?” ಎಂದು ಸ್ಥಳೀಯ ರಾಜು ಕೆ ಸಾಲ್ಯಾನ್ ಪ್ರಶ್ನಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, “ಪಾವಂಜೆ ನಂದಿನಿ ನದಿ ಅರಂದ್ ಪ್ರದೇಶದಲ್ಲಿ ಸ್ಥಳೀಯರಾದ ದಾಮೋದರ ಎಂಬವರ ದÀಕ್ಕೆಯಲ್ಲಿ ಪಂಚಾಯತ್ ಸದಸ್ಯರ ಸಂಬಂಧಿಯೊಬ್ಬರು ಅವ್ಯಾಹತ ಮರಳುಗಾರಿಕೆ ನಡೆಸುತ್ತಿದ್ದು, ಸ್ಥಳೀಯರಿಗೆ ನಿದ್ದೆ ಇಲ್ಲದ ರಾತ್ರಿ ಎದುರಾಗಿದೆ. ಇದರಿಂದ ಅರಂದ್ ಬಳಿ ತಿಂಗಳ ಹಿಂದೆ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿದ್ದ ಕಾಂಕ್ರೀಟ್ ರಸ್ತೆ ಅಕ್ರಮ ಮರಳುಗಾರಿಕೆಯಿಂದ ಕೊಚ್ಚಿ ಹೋಗುವ ಭೀತಿಯಲ್ಲಿದೆ” ಎಂದು ದೂರಿದರು.

“ಅಕ್ರಮ ಮರಳುಗಾರಿಕೆ ಬಗ್ಗೆ ಹಳೆಯಂಗಡಿ ಪಂಚಾಯತ್ ಕೂಡ ಮೌನ ವಹಿಸಿದ್ದು ಪಂಚಾಯತ್ ಬಿಜೆಪಿ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂದು ಸಂಶಯ ಮೂಡುತ್ತಿದೆ. ಕಳೆದ ಕೆಲವು ತಿಂಗಳಿನಿಂದ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರೂ ಗಣಿ ಭೂವಿಜ್ಞಾನ ಇಲಾಖೆ ಮೌನವಾಗಿದೆ” ಎಂದು ತಿಳಿಸಿರುವ ಅವರು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರಿಗೆ ದೂರು ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ. ಹÀಳೆಯಂಗಡಿ ಪಂಚಾಯತ್ ಅಧ್ಯಕ್ಷರು ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಪಕ್ಷಬೇಧ ಮರೆತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

LEAVE A REPLY