ಅಂಗನವಾಡಿ ಬಳಿ ಅಕ್ರಮ ಗ್ಯಾಸ್ ಗೋಡೌನ್

ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಅಡಕ್ಕಲ್ ಎಂಬಲ್ಲಿ ಅಂಗನವಾಡಿಯ ಕೇವಲ 20 ಮೀಟರ್ ಅಂತರದಲ್ಲಿ ಅಕ್ರಮ ಗ್ಯಾಸ್ ಗೋಡೌನ್ ನಿರ್ಮಾಣವಾಗುತ್ತಿದೆ  ಶಾಲಾ ಕಾಲೇಜುಗಳ 100 ಮೀಟರ್ ದೂರದಲ್ಲಿ ಬೀಡಿ ಸಿಗರೇಟ್ ಸಹ ಮಾಡಬಾರದೆಂಬ ನಿಯಮವಿದ್ದರೂ  ಗ್ಯಾಸ್ ಗೋಡೌನ್ ಬಗ್ಗೆ ನ್ಯಾಯಾಲಯದ ಎಲ್ಲ ನಿಬಂಧನೆಗಳನ್ನು ಉಲ್ಲಂಘಿಸಿ ಅಂಗನವಾಡಿ ಹತ್ತಿರ  ವಸತಿ ಸಮುಚ್ಛಯದ ಎಡೆಯಲ್ಲಿ ಹಾಗೂ ಸಾರ್ವಜನಿಕ ಆಟದ ಮೈದಾನದ ಪಕ್ಕದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಈ ಗ್ಯಾಸ್ ಗೋಡೌನ್ ಬಗ್ಗೆ ಮುಂದಕ್ಕೆ ಒಂದೊಮ್ಮೆ ನಡೆಯಬಹುದಾದ ಭೀಕರ ದುರಂತವನ್ನು ಊಹಿಸಿ ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಗಳು ಗಮನಿಸಬೇಕಾಗಿ ವಿನಂತಿ

  • ನಾಗರಿಕರು  ಅಡಕ್ಕಲ್  ಉಪ್ಪಿನಂಗಡಿ