ಸಿದ್ದು ಸಂಪುಟದಲ್ಲಿ ಏನೂ ಗೊತ್ತಿಲ್ಲದ ಮಂತ್ರಿಗಳು

ಸೀಎಂ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಪರಮೇಶ್ವರ ಕೆಲವು ಪ್ರಕರಣಗಳಲ್ಲಿ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆ ಗಮನಿಸಿ.
ಪ್ರಕರಣ ಒಂದು
ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ : ನನಗೆ ಗೊತ್ತಿಲ್ಲ ವರದಿ ತರಿಸಿ ವಿಚಾರಿಸುತ್ತೇನೆ.

ಪ್ರಕರಣ ಎರಡು
ಡಿವೈಎಸ್‍ಪಿ ಕಳ್ಳಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣ : ನನ್ನ ಗಮನಕ್ಕೆ ಬಂದಿಲ್ಲ ಆ ಬಗ್ಗೆ ಪರಿಶೀಲಿಸುತ್ತೇನೆ.

ಪ್ರಕರಣ ಮೂರು
ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ : ಹೌದಾ ರಾಜೀನಾಮೆ ಕೊಟ್ಟಿದ್ದಾರಾ ? ನನಗೆ ಗೊತ್ತಿಲ್ಲ ಆ ಬಗ್ಗೆ ವಿಚಾರಿಸುತ್ತೇನೆ.

ಪ್ರಕರಣ ನಾಲ್ಕು
ಪರಮೇಶ್ವರ ನಾಯ್ಕ ಪ್ರಕರಣ : ನನ್ನ ಗಮನಕ್ಕೆ ಬಂದಿಲ್ಲ, ವರದಿ ತರಿಸಿ ವಿಚಾರಿಸುತ್ತೇನೆ.

ಪ್ರಕರಣ ಐದು
ಮಾಜಿ ಅಬಕಾರಿ ಸಚಿವ ಎಚ್ ವೈ ಮೇಟಿ ಲೈಂಗಿಕ ಪ್ರಕರಣ : ನನಗೆ ಗೊತ್ತಿಲ್ಲ, ನಿಮಗೆ ಹೇಳಿದವರು ಯಾರು ?

ಪ್ರಕರಣ ಆರು
ಹೊಸ ವರ್ಷಾಚರಣೆಟಯಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ : ನನಗೆ ಗೊತ್ತಿಲ್ಲ ; ಪೊಲೀಸ್ ಇಲಾಖೆಯಿಂದ ವರದಿ ತರಿಸಿ ವಿಚಾರಿಸುತ್ತೇನೆ.

ಪ್ರಕರಣ ಏಳು : ಕೆ ಜಿ ಹಳ್ಳಿಯಲ್ಲಿ ರಾತ್ರಿ 2.40 ಸಮಯದಲ್ಲಿ ಮಹಿಳೆಯನ್ನು ಹಿಂಬಾಲಿಸಿ ಅತ್ಯಾಚಾರಕ್ಕೆ ಯತ್ನ : ನನ್ನ ಗಮನಕ್ಕೆ ಬಂದಿಲ್ಲ. ಪೊಲೀಸ್ ಇಲಾಖೆಯಿಂದ ವರದಿ ತರಿಸಿ ಘಟನೆ ನಡೆದಿದ್ದರೆ ಸ್ಟ್ರಿಂಜೆಂಟ್ ಆ್ಯಕ್ಶನ್ ತೆಗೆದುಕೊಳ್ಳುತ್ತೇನೆ.
ಹೀಗೆ ಎಲ್ಲಾ ಪ್ರಕರಣದಲ್ಲೂ ಸಿದ್ದರಾಮಯ್ಯ ಮತ್ತು ಪರಮೇಶ್ವರರಿಂದ `ಕೇವಲ ಗೊತ್ತಿಲ್ಲ’ ಎಂಬ ಉತ್ತರ ಬಿಟ್ಟರೆ ಬೇರೇನು ಗೊತ್ತೇ ಇಲ್ಲ. ಆದರೆ ಟೀವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಬಂದರೂ ಮುಖ್ಯಮಂತ್ರಿಯವರಿಗೆ ಗೊತ್ತಿಲ್ಲ
ಗೃಹ ಇಲಾಖೆ ನಿಮ್ಮ ಮುಷ್ಠಿಯೊಳಗೆ ಇದೆ. ರಾಜ್ಯದ ಪ್ರತಿಕ್ಷಣದ ಆಗುಹೋಗುಗಳು ರಾಜ್ಯದ ಎಲ್ಲಾ ಟಿವಿ ಚ್ಯಾನೆಲುಗಳಲ್ಲಿ ಬಂದೂ ಜನಸಾಮಾನ್ಯರಿಗೆ ತಿಳಿದರೂ ನಿಮಗೇಕೆ ತಿಳಿಯುವುದಿಲ್ಲ ? ಕೇವಲ `ಗೊತ್ತಿಲ್ಲ, ವರದಿ ತರಿಸಿ ವಿಚಾರಿಸುತ್ತೇನೆ’ ಎಂದೆಲ್ಲಾ ಬಡಬಡಿಸಿ ಪ್ರತಿಕ್ರಿಯೆ ನೀಡುವ ನಿಮಗೆ ಒಂದಿಷ್ಟಾದರೂ ನಿಮ್ಮ ಇಲಾಖೆಯ ಬಗ್ಗೆ ತಿಳಿದುಕೊಳ್ಳುವ ಕಾತುರ ಇದೆಯೆನಿಸುವುದಿಲ್ಲ. ಇನ್ನು ಉಳಿದ ಸಮಯವನ್ನು `ಗೊತ್ತಿಲ್ಲ’ ಎಂದೇ ಕಾಲ ಕಳೆಯುವಿರಾ ? ರಾಜ್ಯದ ಜನತೆ ಭಾಗ್ಯವಂತರು ನಿಮ್ಮನ್ನು ಪಡೆದುದಕ್ಕೆ

  • ಶ್ರೀಕರ ಪೂಜಾರಿ ಮೂಡಬಿದ್ರೆ