ಕ್ರೀಡಾಪಟುಗಳಿಂದ ಇಫ್ತಾರ್ ಸಂಗಮ

ಅರಬ್ ರೈಡರ್ಸಿನಿಂದ ನಡೆದ ಇಫ್ತಾರ್ ಸಂಗಮ

 

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಗ್ರಾಮೀಣ ಕ್ರೀಡೆಯಾದ ಕಬಡ್ಡಿಯಲ್ಲಿ ಅತ್ಯಲ್ಪ ಸಮಯದಲ್ಲೇ ಜಿಲ್ಲೆಯಲ್ಲೇ ಉತ್ತಮ ಪ್ರದರ್ಶನವನ್ನು ನೀಡಿ ಕ್ರೀಡಾ ಪ್ರೇಮಿಗಳ ಜನಮನ ಸೆಳೆದ ತೂಮಿನಾಡು ಅರಬ್ ರೈಡರ್ಸ್ ಕ್ಲಬ್ ಸದಸ್ಯರು ತೂಮಿನಾಡು ಅಲ್ ಫತಾಃ ಜುಮಾ ಮಸೀದಿಯಲ್ಲಿ ಇಫ್ತಾರ್ ಸಂಗಮವನ್ನು ಏರ್ಪಡಿಸಿದರು.

ಸುಮಾರು 300 ಮಂದಿ ಇಫ್ತಾರ್ ಸಂಗಮದಲ್ಲಿ ಪಾಲ್ಗೊಂಡರು. ಇದೇ ಕ್ಲಬ್ ವತಿಯಿಂದ ಈದುಲ್ ಫಿತ್ರ್ ರಾತ್ರಿಯಂದು ಸುಮಾರು  150 ನಿರ್ಗತಿಕ ಕುಟುಂಬಗಳಿಗೆ ಈದ್ ಹಬ್ಬಕ್ಕೆ ಬೇಕಾಗಿರುವ ಆಹಾರ ಸಾಮಗ್ರಿಗಳ ಕಿಟ್ ಕೂಡಾ ವಿತರಿಸಲಾಗುವುದಾಗಿ ಸಂಘಟಕರು ಪತ್ರಿಕೆಗೆ ತಿಳಿಸಿದ್ದಾರೆ. ಇಫ್ತಾರ್ ಬಳಿಕ ಭೋಜನದ ಕಿಟ್ ಕೂಡಾ ವಿತರಿಸಲಾಯಿತು.