`ಇಬ್ಬರು ಪ್ರೀತಿಯಲ್ಲಿದ್ದರೆ ಮದುವೆ ಅಗತ್ಯವಿಲ್ಲ’ : ಲುಲಿಯಾ

ರೋಮಾನಿಯನ್ ಬ್ಯೂಟಿ ಲುಲಿಯಾ ವಂತೂರ್ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಎಂದೇ ಇಲ್ಲಿ ಫೇಮಸ್. ಸಲ್ಮಾನ್-ಹಾಗೂ ಲುಲಿಯಾ ತಮ್ಮ ಸಂಬಂಧದ ಬಗ್ಗೆ ಎಲ್ಲೂ ತುಟಿ ಬಿಚ್ಚದಿದ್ದರೂ ಅವರಿಬ್ಬರೂ ರಿಲೇಶನ್ಶಿಪ್ಪಿನಲ್ಲಿರುವುದು ಆಕೆಗೆ ಸಲ್ಲು ಹಾಗೂ ಆತನ ಕುಟುಂಬದವರ ಜೊತೆಗಿರುವ ಒಡನಾಟದಿಂದಾಗಿ ಎಲ್ಲರಿಗೂ ಗೊತ್ತಿರುವ ವಿಷಯವೇ. ಆಕೆ ಹೆಚ್ಚಾಗಿ ಇರುವುದೂ ಸಲ್ಮಾನ್ ಮನೆಯಲ್ಲಿಯೇ.

ಸಲ್ಮಾನ್-ಲುಲಿಯಾ ಬಳಿ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ …ನೀವು ಯಾವಾಗ ಮದುವೆಯಾಗುತ್ತೀರಿ ಎಂದು. ಇದೀಗ ಲುಲಿಯಾ ಆ ಪ್ರಶ್ನೆಗೆ ಉತ್ತರಿಸಿದ್ದಾಳೆ. “ಮದುವೆ ಯಾವಾಗ ಆಗುತ್ತದೆ ಎಂದು ನನಗೂ ಗೊತ್ತಿಲ್ಲ. ನನಗೂ ಅರ್ಜೆಂಟ್ ಇಲ್ಲ. ನನ್ನ ಪ್ರಕಾರ ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿಯಲ್ಲಿದ್ದರೆ ಮದುವೆಯೇ ಆಗಬೇಕೆಂದಿಲ್ಲ. ಮದುವೆ ಎನ್ನುವುದು `ಜಸ್ಟ್ ಪೀಸ್ ಆಫ್ ಪೇಪರ್’ ಅಷ್ಟೇ. ಇಬ್ಬರಲ್ಲೂ ಉತ್ತಮವಾದ ಅನುಬಂಧ ಹಾಗೂ ಬದ್ಧತೆ ಇದ್ದರೆ ಬೇರೆ ಯಾವ ಗ್ಯಾರೆಂಟಿಯೂ ಬೇಕಿಲ್ಲ” ಎಂದಿದ್ದಾಳೆ.

ಲುಲಿಯಾಗೆ ಒಂದೇ ಒಂದು ಅಸಮಾಧಾನವೆಂದರೆ ಆಕೆಯನ್ನು ಪ್ರತೀ ಬಾರಿ ಸಲ್ಮಾನ್ ಗರ್ಲ್ ಫ್ರೆಂಡ್ ಎಂದೇ ಕರೆಯುವುದು ಆಕೆಗೆ ಇಷ್ಟವಿಲ್ಲ. “ನನಗೂ ನನ್ನದೇ ಆದ ಹಿನ್ನೆಲೆಯಿದೆ, ವೃತ್ತಿ ಇದೆ, ವ್ಯಕ್ತಿತ್ವವಿದೆ. ಹಾಗಾಗಿ ನನ್ನನ್ನು ಅದೇ ರೀತಿ ಗುರುತಿಸಿದರೆ ನನಗೆ ಖುಶಿಯಾಗುತ್ತದೆ” ಎಂದಿದ್ದಾಳೆ.

 

LEAVE A REPLY