ಮಾಯಾವತಿ ಅವಕಾಶವಾದಿಯಾದರೆ ನಿತೀಶ ಮೌಲ್ಯಾಧರಿತ ರಾಜಕಾರಣಿಯೇ

 

ಇತ್ತೀಚೆಗೆ ಬಿಹಾರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ನಿತೀಶಕುಮಾರ್ ಆರ್ಜೆಡಿ ಮುಖಂಡರ ಭ್ರಷ್ಟಾಚಾರದ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮಹಾಮೈತ್ರಿಯನ್ನು ಮುರಿದ ನಂತರದ 14 ಗಂಟೆಗಳಲ್ಲಿ ಬಿಜೆಪಿ ಬೆಂಬಲದೊಂದಿಗೆ ಮತ್ತೆ ನಿತೀಶ್ ಮುಖ್ಯಮಂತ್ರಿ ಗಾದಿಗೇರಿದರು ಇಲ್ಲಿ ನಮಗೆ ಕಾಡುತ್ತಿರುವ ಪ್ರಶ್ನೆ ಏನೆಂದರೆ ಅಂದು ಬಹುಜನ ಸಮಾಜ ಪಕ್ಷದ ಮಾಯಾವತಿಯವರು ಇದೇ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಪದವಿಗೇರಿದಾಗ ಈ ದೇಶದ ಬುದ್ಧಿಜೀವಿಗಳು ಮಾಯಾವತಿ ಕೋಮುವಾದಿಗಳೊಂದಿಗೆ ಅಧಿಕಾರದ ಆಸೆಗಾಗಿ ಕೈ ಜೋಡಿಸಿದ್ದರು ಎಂದು ಟೀಕಿಸಿದ್ದರು. ಕೆಲ ಮನುವಾದಿ ಮಾಧ್ಯಮಗಳು ಮಾಯಾವತಿಯವರನ್ನು ಅವಕಾಶವಾದಿ ರಾಜಕಾರಣ ಎಂದು ಜರಿದಿದ್ದವು ಈಗ ನಿತೀಶಕುಮಾರ್ ಅವಕಾಶವಾದಿಯಲ್ಲವೇ ಒಬ್ಬ ದಲಿತ ಮಹಿಳೆ ಇತರ ಪಕ್ಷಗಳ ಬೆಂಬಲದಿಂದ ಉನ್ನತಹುದ್ದೆಗೇರಿದ್ದು ಅದು ಅವಕಾಶವಾದಿ ರಾಜಕಾರಣ. ಅದೇ ಕೆಲಸವನ್ನು ನಿತೀಶಕುಮಾರ್ ಮಾಡಿದರೆ ಮೌಲ್ಯಧಾರಿತ ರಾಜಕಾರಣಿ ಹೇಗಿದೆ ನೋಡಿ ಇವರ ವ್ಯಾಖ್ಯಾನ

  • ಕೆ ವಸಂತಿ  ಬೆಳುವಾಯಿ ನೊಂದ ದಲಿತ ಮಹಿಳೆ