ಸ್ಕ್ರಿಪ್ಟ್ ಇಷ್ಟವಾದರೆ ನಗ್ನವಾಗಿ ನಟಿಸಲೂ ಸಿದ್ಧ : ಆಪ್ಟೆ

`ಪರ್ಚೇದ್’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದ ರಾಧಿಕಾ ಆಪ್ಟೆ, ಈಗ ಸ್ಕ್ರಿಪ್ಟ್ ಇಷ್ಟವಾದರೆ ನಗ್ನವಾಗಿ ನಟಿಸಲೂ ಸಿದ್ಧ ಎಂದು ಹೇಳಿ ಸಿನಿರಸಿಕರಲ್ಲಿ ಸೆನ್ಸೇಶನ್ ಸೃಷ್ಟಿ ಮಾಡಿದ್ದಾಳೆ.
ಕೆಲವು ಬಾರಿ ಆಕೆಯ ನಗ್ನ ವೀಡಿಯೋ ಲೀಕ್ ಆಗಿ ಸುದ್ದಿಯಾಗಿರುವ ರಾಧಿಕಾ ಈಗ ಬೆತ್ತಳಾಗಿ ತೆರೆಮೇಲೆ ಬರಲೂ ರೆಡಿಯಿದ್ದೇನೆ ಎಂದು ಹೇಳಿ ಪಡ್ಡೆಗಳ ನಿರೀಕ್ಷೆಗೆ ಮತ್ತಷ್ಟು ಇಂಬು ನೀಡಿದ್ದಾಳೆ. ಹಾಗಂತ ಯಾವ್ಯಾವುದೋ ಚಿತ್ರದಲ್ಲಿ ರಾಧಿಕಾ ಬೆತ್ತಲಾಗಲು ರೆಡಿ ಇಲ್ಲವಂತೆ. “ಸಿನಿಮಾದಲ್ಲಿ ನಗ್ನವಾಗಿ ನಟಿಸಬೇಕೆಂದರೆ ಮೊದಲು ಆ ಸಿನಿಮಾದ ಕಥೆ ನನಗೆ ಇಷ್ಟವಾಗಬೇಕು, ಆ ಸಿನಿಮಾದಲ್ಲಿ ನನ್ನ ಪಾತ್ರ ಅದ್ಭುತವಾಗಿರಬೇಕು, ಆ ಪಾತ್ರ ಸಮಾಜಕ್ಕೆ ಸಂದೇಶ ನೀಡಬೇಕು, ನಗ್ನತೆಯೂ ಕಲಾತ್ಮಕತೆಯಿಂದ ಕೂಡಿರಬೇಕು, ನಗ್ನವಾಗಿ ಕಾಣಿಸುವುದು ಒಂದು ಆರ್ಟ್, ಅದಕ್ಕೆ ನಾನು ಯಾವಾಗಲೂ ಸಿದ್ಧ” ಎನ್ನುವ ವಿವರಣೆಯನ್ನೂ ನೀಡಿದ್ದಾಳೆ.