ಬಗರ್ ಹುಕುಂ ಜಮೀನು ಫೆÇೀರ್ಜರಿ ; ಐಎಎಸ್ ಗಾರ್ಗಿ ಜೈನ್ ವರದಿ ಸಲ್ಲಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಸರಕಾರ ಬಗರ್ ಹುಕುಂ ಜಮೀನು ಸಕ್ರಮ ನಿಯಮವನ್ನು ಮತ್ತೆರಡು ವರ್ಷಗಳಿಗೆ ವಿಸ್ತಾರ ಮಾಡಿರುವ ನಡುವೆಯೇ, ಕೃಷಿ ಜಮೀನು ಸಕ್ರಮದ ಹೆಸರಿನಲ್ಲಿ ತಾಲೂಕು ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕರಾಳ ಮುಖಗಳನ್ನು ತೆರೆದಿಡುವ ತನಿಖಾ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ಮಾಡಿರುವ ಐಎಎಸ್ ಪರೀಕ್ಷಾವಧಿ ಅಧಿಕಾರಿ ಕು ಗಾರ್ಗಿ ಜೈನ್, ಪುತ್ತೂರು ಉಪವಿಭಾಗದ ಸಹಾಯಕ ಪೆÇಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಮತ್ತು  ಮೂಡುಬಿದಿರೆ ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಅವರು ವರದಿಯನ್ನು ಸಲ್ಲಿಸಿದ್ದಾರೆ.

ಬಂಟ್ವಾಳ ತಾಲೂಕು ಕೆಡಿಪಿ ಸದಸ್ಯ ಮತ್ತು ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ  ರಾಜೇಶ್ ಬಾಳೆಕಲ್ಲು ಅವರ ಮನವಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ಜಿ ಜಗದೀಶ್ ಅವರು ತನಿಖೆಗೆ ಆದೇಶ ನೀಡಿದ್ದರು. ಬಂಟ್ವಾಳ ತಾಲೂಕು ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಸರಕಾರದ ಸೀಲು ಮತ್ತು ಸಹಿ ಪೆÇೀರ್ಜರಿ ಮಾಡಿ ಅಕ್ರಮ ಸಕ್ರಮ ಮತ್ತು ಟಿ ಟಿ ದಂಡನೆ ದಾಖಲೆಗಳನ್ನು ಸೃಷ್ಟಿ ಮಾಡಿ ಸರಕಾರಿ ಜಮೀನುಗಳನ್ನು ಕಬಳಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಆಕ್ಷೇಪವೆತ್ತಿದ್ದರು.

ಬಂಟ್ವಾಳ ತಾಲೂಕಿನ ಮಾಣಿ, ಮಾಣಿಲ, ಕೆದಿಲ, ಪೆರುವಾಯಿ, ಪೆರಾಜೆ, ಬಾಳ್ತಿಲ, ಪೆರ್ನೆ, ಬಿಳಿಯೂರು ಮುಂತಾದ ಗ್ರಾಮಗಳಲ್ಲಿ ಫೆÇೀರ್ಜರಿ ದಾಖಲೆ ಸೃಷ್ಟಿ, ಅಕ್ರಮವಾಗಿ ಕಡಿತ ಸಿದ್ಧಪಡಿಸಿರುವುದು, ಅಕ್ರಮ ಸಕ್ರಮ ಸಭೆ ನಡೆಯದಿದ್ದರೂ ಜಮೀನು ಮಂಜೂರು ಮಾಡಿರುವುದು, ಒಂದೇ ಕುಟುಂಬಕ್ಕೆ ಮಿತಿಗಿಂತ ಹೆಚ್ಚು ಜಮೀನು ಮಂಜೂರು ಮಾಡಿರುವುದು, ನಕಲಿ ದಾಖಲೆ ಸೃಷ್ಟಿ ಮಾಡಿರುವುದು, ಹಳೆಯ ಟಿ ಟಿ ದಂಡನೆ ಪಾವತಿಯ ನಕಲಿ ಸೃಷ್ಟಿ ಮಾಡಿ ಅನರ್ಹ ವ್ಯಕ್ತಿಗಳು ಸರಕಾರದ ಮಾತ್ರವಲ್ಲದೆ, ಇನ್ನಿತರ ಬಡವರ ಜಮೀನುಗಳನ್ನು ಕಬಳಿಸಿರುವುದಾಗಿ ಕೇಳಿ ಬಂದಿರುವ ಪ್ರಮುಖ ಆರೋಪಗಳಾಗಿವೆ.

ಹಿಂದೊಮ್ಮೆ ಪೆÇಲೀಸ ಇಲಾಖೆ ವತಿಯಿಂದ ನಡೆದ ತನಿಖೆಯಲ್ಲಿ ಇಂತಹ ಕೆಲವು ಪೆÇೀರ್ಜರಿ ಪ್ರಕರಣಗಳು ಮತ್ತು ಕಾನೂನುಬಾಹಿರ ಜಮೀನು ಮಂಜೂರು ಮಾಡಿರುವ ಪ್ರಕರಣಗಳು ಪತ್ತೆಯಾಗಿವೆ. ಬಂಟ್ವಾಳದಲ್ಲಿ ತಹಶೀಲ್ದಾರ್ ಆಗಿದ್ದ ಕೆಲವು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅನಂತರ ಆ ಪ್ರಕರಣಗಳನ್ನು ರಾಜಕೀಯ ಪ್ರಭಾವದ ಮೂಲಕ ಮುಚ್ಚಿ ಹಾಕಲಾಗಿದ್ದು, ನ್ಯಾಯಾಲಯಕ್ಕೆ ಬಿ ರಿಪೆÇೀರ್ಟ್ ಸಲ್ಲಿಸಲಾಗಿತ್ತು.

ಕಿರಿಯ ಪೆÇಲೀಸ್ ಅಧಿಕಾರಿಗಳು ಇಂತಹ ತನಿಖೆ ನಡೆಸುವ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಪೆÇಲೀಸರಿಗೆ ನೀಡದೆ ಸಾಗಹಾಕುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಕಿರಿಯ ಐಎಎಸ್ ಅಧಿಕಾರಿ ಮತ್ತು ಎಎಸ್ಪಿ ಮಟ್ಟದ ಐಪಿಎಸ್ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಿದ್ದರು.

ಹಲವು ವರ್ಷಗಳಿಂದ ಮನೆ ಕಟ್ಟಿ ಕೃಷಿ ಮಾಡಿಕೊಂಡು ಬಂದಿರುವ ಜಮೀನು ದಾಖಲೆಯಲ್ಲಿ ಬೇರೆಯವರ ಹೆಸರಿನಲ್ಲಿದೆ ಎಂದು ಹಲವು ಮಂದಿ ತೊಂದರೆಗೀಡಾದ ಗ್ರಾಮಸ್ಥರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು.

ತಹಶೀಲ್ದಾರ್ ಮಟ್ಟದ ಕಂದಾಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿರುವುದಲ್ಲದೆ, ಇನ್ನಿತರ ಹಲವು ಪ್ರಕರಣಗಳಲ್ಲಿ ಮಾಣಿಯ ಮಕರಂದ ಭಟ್ಟ ಎಂಬಾತ ಅಕ್ರಮವಾಗಿ ನಕಲಿ ಸೀಲುಗಳನ್ನು ತಯಾರಿಸಿ ನಕಲಿ ಸಹಿ ಹಾಕಿ ಕಡತ ಸಿದ್ಧಪಡಿಸುತ್ತಿದ್ದ ಎನ್ನಲಾಗಿದೆ. ಸಾಗುವಳಿ ಚೀಟಿ, ಟಿ ಟಿ ದಂಡನೆ ರಶೀದಿಗಳನ್ನು ಕೂಡ ಅಕ್ರಮವಾಗಿ ಮಾಡಲಾಗುತಿತ್ತು. ಬಹಳಷ್ಟು ಪ್ರಕರಣಗಳಲ್ಲಿ ದಾಖಲೆ ವಿಭಾಗದ ಸಿಬ್ಬಂದಿಯ ಕೈವಾಡದ ಬಗ್ಗೆ ಕೂಡ ಗಂಭೀರ ಆರೋಪಗಳಿವೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಿರುಕುಳವಾಗಿ ಸರಕಾರಿ ಕಚೇರಿ, ಪೆÇಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆದಾಡಬೇಕಾಗಿದೆ. ಬಂಟ್ವಾಳದ ಬಹಳಷ್ಟು ಭೂ ಸಂಬಂಧಿ ವಾಜ್ಯಗಳು ಸರಕಾರದ ವೈಫಲ್ಯದಿಂದ ನ್ಯಾಯಾಲಯದ ಕಟಕಟೆ ಹತ್ತಿದ್ದು, ನ್ಯಾಯಾಲಯದ ಸಮಯ ಹಾಳಾಗುತ್ತಿದೆ.

ಈ ಮಧ್ಯೆ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬಗರ್ ಹುಕುಂ ಜಮೀನು ಅಕ್ರಮ ಸಕ್ರಮ ನೀಯಮಗಳನ್ನು ಇನ್ನಷ್ಟು ಸಡಿಲಗೊಳಿಸಿದ್ದು, ಭ್ರಷ್ಟಾಚಾರಿಗಳಿಗೆ ವರದಾನವಾಗಲಿದೆ. ಬಗರ್ ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಲು ವಿಳಂಬ ಆಗುತ್ತಿರುವ ನೈಜ ಸಮಸ್ಯೆಯನ್ನು ಪತ್ತೆ ಮಾಡಿ ಪಾರದರ್ಶಕವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕಂದಾಯ ಸಚಿವರು ಕ್ರಮಕೈಗೊಂಡಿಲ್ಲ. ಈಗ ಕೇವಲ ಹಣವಂತರು ಮಾತ್ರ ಲಂಚ ನೀಡಿ ಜಮೀನು ಸಕ್ರಮ ಮಾಡಿಕೊಳ್ಳುತ್ತಿದ್ದಾರೆ.