ಐಎಎಸ್ ಅಧಿಕಾರಿ ಶವ ಹಳಿ ಮೇಲೆ ಪತ್ತೆ

ಜಿಗುಪ್ಸೆಯಿಂದ ಆತ್ಯಹತ್ಯೆ

 ಬಕ್ಸಾರ್ (ಬಿಹಾರ) : ಬಿಹಾರದ ಐಎಎಸ್ ಅಧಿಕಾರಿ  ಮುಖೇಶ್ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದು ಬಕ್ಸಾರ್ ಬಳಿಯ ರೈಲು ಹಳಿಯ ಬಳಿ ಶವ ದೊರೆತಿದೆ. ಸಾಯುವ ಮುನ್ನ ಪಾಂಡೆ ಬರೆದಿಟ್ಟ ಪತ್ರವೂ ಪೊಲೀಸರಿಗೆ ದೊರಕಿದೆ ಎಂದು ಹೇಳಲಾಗಿದೆ. ಗಜಿಯಾಬಾದ್ ರೈಲು ನಿಲ್ದಾಣದ ಸಮೀಪದಲ್ಲೇ ಮೃತ ದೇಹಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಮ್ಮ ಡೆತ್ ನೋಟಿನಲ್ಲಿ  ಮೃತ ಪಾಂಡೆ ತಾವು ಜೀವನದಲ್ಲಿ ಬೇಸತ್ತಿದ್ದು ಮನುಜ ಜೀವನದಲ್ಲೇ ಆಸಕ್ತಿ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಪಶ್ಚಿಮ ದೆಹಲಿಯ ಜನಕಪುರಿಯ ಕೇಂದ್ರ ಪ್ರದೇಶದಲ್ಲಿ 10ನೆಯ ಮಹಡಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರುವ ಪಾಂಡೆ  ತಾವು ಜೀವನದಲ್ಲಿ ಜಿಗುಪ್ಸೆ ಹೊಂದಿರುವುದಾಗಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಮುಖೇಶ್ ಪಾಂಡೆಯ ಅತ್ಮಹತ್ಯೆಯ ವೇಳೆಯನ್ನು ಕಂಡುಹಿಡಿಯಲಾಗುತ್ತಿದೆ.