ರಾಜಕೀಯಕ್ಕೆ ಕಾಲಿಟ್ಟಾಗಿದೆ: ಕಮಲ್ ಹಾಸನ್ ಉವಾಚ

ಚೆನ್ನೈ : ತಾನು ರಾಜಕೀಯಕ್ಕೆ ಬಂದಾಗಿಬಿಟ್ಟಿದೆ ಎಂದು ತಮಿಳು ಸೂಪರ್‍ಸ್ಟಾರ್ ಕಮಲ್ ಹಾಸನ್ ಹೇಳಿದ್ದಾರೆÉ. ರಜನೀಕಾಂತರನ್ನೂ ಸಹ  ರಾಜಕೀಯ ಪಕ್ಷಕ್ಕೆ ಸೇರಿಸಿಕೊಳ್ಳುವ ಇರಾದೆ ಇದೆಯೇ ಎಂದು ಕೇಳಿದಾಗ ಕಮಲ್, “ನಾನು ಗೆಳೆಯ ರಜನಿ ಜೊತೆಯಲ್ಲಿ ವೃತ್ತಿಪರ ವಿಷಯದ ಚರ್ಚಿಸಿದ್ದೇನೆ. ಅವರೊಂದಿಗೆ ರಾಜಕೀಯ ಚರ್ಚಿಸಲು ಕಷ್ಟವಾಗದು” ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ.