ಹೌದು, ನಾನೂ ಗೋಮಾಂಸ ತಿನ್ತೇನೆ, ಏನಿವಾಗ ?

CM Siddaramaiah with KC Venugopal, Karnataka In charge, KPCC President G Parameshwar, Oscar Fernandes, Senior Congress Leader and others seen at the KPCC office bearers meeting at KPCC, in Bengaluru on Friday 21st July 2017

`ನಾನೊಬ್ಬ ಹಿಂದು’ ಎಂದು ಹೇಳಿಕೊಂಡ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್

ಬೆಂಗಳೂರು : “ನಾನೊಬ್ಬ ಹಿಂದು, ನಾನೂ ಗೋಮಾಂಸವನ್ನೂ ತಿನ್ನುತ್ತೇನೆ. ಇದು ನನ್ನ ಹಕ್ಕು ಕೂಡಾ ಆಗಿದೆ” ಎಂದಿದ್ದಾರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್.

ಕೇಂದ್ರದ ಬಿಜೆಪಿ ಆಡಳಿತದಡಿಯಲ್ಲಿ ಗೋಮಾಂಸ ರಫ್ತು ಅತ್ಯಧಿಕವಾಗಿರುವ ಹೊರತಾಗಿಯೂ ಗೋಮಾಂಸದ ವಿಚಾರವಾಗಿ ಬಿಜೆಪಿ ಅನಗತ್ಯ ವಿವಾದ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವೇಣುಗೋಪಾಲ್ ಹೇಳಿದ್ದಾರೆ. ಸಮಾನತೆಯಲ್ಲಿ ನಂಬಿಕೆಯಿರುವ, ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತದ ಹಾಗೂ ಇತರರ ಆಚಾರ-ವಿಚಾರ ಹಾಗೂ ಆಹಾರ ಸಂಸ್ಕøತಿಯನ್ನು ಗೌರವಿಸುವವನೇ ನಿಜವಾದ ಹಿಂದು” ಎಂದು ವೇಣುಗೋಪಾಲ್ ವ್ಯಾಖ್ಯಾನ ಮಾಡಿದ್ದಾರೆ.

ರಾಜ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯ ಹಿಂದೆ ಜನರನ್ನು ಮತೀಯ ಆಧಾರದಲ್ಲಿ ಧ್ರುವೀಕರಿಸುವ ಯತ್ನವಿದೆ ಎಂದ ವೇಣುಗೋಪಾಲ್, ಯೋಗಿ ಕರ್ನಾಟಕಕ್ಕೆ ಬಂದು ಮತೀಯ ಉದ್ವಿಗ್ನತೆ ಸೃಷ್ಟಿಸುವ ಬದಲು ತಮ್ಮ ರಾಜ್ಯದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲಿ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಪಕ್ಷದ ಏಕೈಕ ಅಜೆಂಡಾ ಅಭಿವೃದ್ಧಿಯಾಗಿದೆ ಎಂದು ಹೇಳಿದ ಅವರು, ಕರ್ನಾಟಕದ ಜನತೆ ಬಿಜೆಪಿಯ ಕೋಮು ರಾಜಕಾರಣಕ್ಕೆ ಆಸ್ಪದ ನೀಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ರಾಜಕೀಯ ಗಿಮ್ಮಿಕ್ ಮಾಡುತ್ತಿದ್ದಾರೆಂಬುದು ಸ್ಪಷ್ಟ. ಅವರಿಗೆ ಸಮಸ್ಯೆಯನ್ನು ಬಗೆಹರಿಸಲು ನಿಜವಾಗಿಯೂ ಕಾಳಜಿಯಿದೆಯೆಂದಾದರೆ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಯಡ್ಯೂರಪ್ಪಗೆ ಪತ್ರ ಬರೆಯುವ ಬದಲು ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಗೆ ಪತ್ರ ಬರೆಯಬೇಕಿತ್ತು” ಎಂದು ವೇಣುಗೋಪಾಲ್ ಹೇಳಿದರು.

LEAVE A REPLY