ಸಿನಿಮಾ ಸೋತಾಗ ಶಾರೂಕ್ ಬಾತ್ ರೂಮಿಗೆ ಹೋಗಿ ಅಳ್ತಾನಂತೆ.

ಬಾಲಿವುಡ್ಡಿನ ಬಾದಶಹ ಶಾರೂಕ್ ಖಾನನಿಗೆ ಸೋಲು ಅಂದರೆ ಅದೇನೋ ಭಯವೆಂದು ಈ ಮೊದಲೂ ಹೇಳಿಕೊಂಡಿದ್ದಾನೆ. ಇಷ್ಟು ವರ್ಷ ಅಲ್ಲೊಂದು ಇಲ್ಲೊಂದು ಅವನ ಸಿನಿಮಾ ಪ್ಲಾಪ್ ಆಗಿದ್ದರೂ ಹೆಚ್ಚಾಗಿ ಯಶಸ್ಸಿನ ಅಲೆಯಲ್ಲಿಯೇ ತೇಲಿರುವ ಶಾರೂಕ್ ಚಿತ್ರ ಸೋತರೆ ದುಃಖ ತಡೆಯಲಾರದೇ ಬಾತ್ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಅಳುತ್ತಾನಂತೆ.

ಹೀಗೆಂದು ಸ್ವತಃ ಕಿಂಗ್ ಖಾನ್ ಹೇಳಿಕೊಂಡಿದ್ದಾನೆ. ಇತ್ತೀಚಿಗೆ ಸ್ಯಾನ್ ಪ್ರಾನ್ಸಿಸ್ಕೋದಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್ಲಿನಲ್ಲಿ ಶಾರುಖ್ ಪಾಲ್ಗೊಂಡಿದ್ದ. ಈ ಸಂದರ್ಭದಲ್ಲಿ ಅಮೆರಿಕನ್ ಫಿಲ್ಮ್ ಡೈರೆಕ್ಟರ್ ಬ್ರೆಟ್ ಜತೆ ತನ್ನ ಸಿನಿಮಾ ರಂಗದ ಏರಿಳಿತಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾನೆ.

“ನಾನು ನಟಿಸಿದ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡದಿದ್ದರೆ ತುಂಬಾ ಬೇಜಾರಾಗುತ್ತದೆ. ಈ ವೇಳೆ ನನ್ನಷ್ಟಕ್ಕೆ ನಾನು ಬಾತ್‍ರೂಮಿಗೆ ಹೋಗಿ ಲಾಕ್ ಮಾಡಿಕೊಂಡು ಮನಸ್ಸು ಹಗುರವಾಗುವವರೆಗೂ ಅಳುತ್ತೇನೆ” ಎಂದಿದ್ದಾನೆ ಶಾರೂಕ್.