“ನನಗೆ ಬೇರೆಯವರು ಡಬ್ ಮಾಡುವುದು ಇಷ್ಟವಿಲ್ಲ” : ಶ್ರದ್ಧಾ

ಶ್ರದ್ಧಾ ಕಪೂರ್ ಈಗ ಪ್ರಭಾಸ್ ಜತೆ `ಸಾಹೋ’ ಚಿತ್ರದಲ್ಲಿ ನಟಿಸುತ್ತಿದ್ದು ಈ ಸಿನಿಮಾ ಹಿಂದಿಯ ಜೊತೆಗೆ ತಮಿಳು, ತೆಲುಗಿನಲ್ಲೂ ತೆರೆ ಕಾಣಲಿದೆ. ಶ್ರದ್ಧಾ ತಮಿಳು, ತೆಲುಗು ವರ್ಶನ್ನಿಗೂ ತನ್ನ ಪಾಲಿನ ಡಯಲಾಗಿಗೆ ತಾನೇ ಡಬ್ ಮಾಡುವುದಾಗಿ ಹೇಳಿಕೊಂಡಿದ್ದಾಳೆ.

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಶ್ರದ್ಧಾ ತನ್ನ ಮುಂದಿನ ಸಿನಿಮಾ `ಸಾಹೋ’ ಬಗ್ಗೆ ಮಾತಾಡುತ್ತಾ `ಇದೊಂದು ನನಗೆ ಬಹಳ ಸ್ಪೆಷಲ್ ಚಿತ್ರ. ಈ ಸಿನಿಮಾದಲ್ಲಿ ನನ್ನ ಡಯಲಾಗುಗಳನ್ನು ನಾನೇ ಹೇಳಲು ಬಯಸುತ್ತೇನೆ. ನನಗೆ ಬೇರೆಯವರು ಧ್ವನಿ ಕೊಡುವುದು ಇಷ್ಟವಿಲ್ಲ. ನನಗೆ ತೆಲುಗು, ತಮಿಳು ಭಾಷೆ ಸರಿಯಾಗಿ ಗೊತ್ತಿಲ್ಲದೇ ಇರುವುದರಿಂದ ಡಬ್ ಮಾಡುವುದು ಬಹಳ ಕಷ್ಟವೆನ್ನುವ ವಿಷಯ ಗೊತ್ತಿದೆ. ಆದರೆ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಇನ್ನು ನಿರ್ದೇಶಕರು ಹಾಗೂ ನಿರ್ಮಾಪಕರು ಏನು ಹೇಳುತ್ತಾರೋ ನೋಡಬೇಕು” ಎಂದಿದ್ದಾಳೆ ಶ್ರದ್ಧಾ.

ಶ್ರದ್ಧಾ ಯಾವಾಗಲೂ ತನ್ನ ಚಿತ್ರಗಳಿಗೆ ಭಾರೀ ಪೂರ್ವತಯಾರಿ ನಡೆಸುವ ನಟಿಯರಲ್ಲಿ ಒಬ್ಬಳು. ಪಾತ್ರ ಬಯಸಿದರೆ ಹೊಸ ಹೊಸ ವಿದ್ಯೆ ಕಲಿಯಲೂ ಆಕೆ ಹಿಂದೇಟು ಹಾಕುವುದಿಲ್ಲ.