`ದಂಗಲ್’ ರಾಜಕೀಯ ಪೋಸ್ಟರುಗಳನ್ನು ಕಿತ್ತೆಸೆದ ಹೈದರಾಬಾದ್ ಪೊಲೀಸರು

 ಹೈದರಾಬಾದ್ : ನಗರದ ಸಂಸದ ಹಾಗೂ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದ್-ಉಲ್-ಮುಸ್ಲಿಮೀನ್ ಮುಖ್ಯಸ್ಥ ಅಸಸುದ್ದೀನ್ ಒವೈಸಿ ದಂಗಲ್ ಪೋಸ್ ನೀಡಿ ಇತರ ರಾಜಕೀಯ ನಾಯಕರೊಂದಿಗೆ ಕುಳಿತಿರುವ ಚಿತ್ರವಿರುವ ಪೋಸ್ಟರುಗಳನ್ನು ನಗರ ಪೊಲೀಸರು ಕಿತ್ತೆಸೆದಿದ್ದಾರೆ.

ಪೋಸ್ಟರುಗಳಲ್ಲಿ ಅಮೀರ್ ಪೋಸಿನಲ್ಲಿ ಒವೈಸಿ ಕುಳಿತಿದ್ದರೆ ಅವರ ಸುತ್ತಲೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಇದ್ದಾರೆ.

ಮದೀನಾ ಹಾಗೂ ಅಫ್ಝಲ್ ಗುಂಜ್ ಪ್ರದೇಶಗಳಲ್ಲಿ ಈ ಪೋಸ್ಟರುಗಳು ಕಂಡು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ದೂರು ದಾಖಲಿಸಿತ್ತು. ತನಗೆ ಈ ಪೋಸ್ಟರುಗಳ ಬಗ್ಗೆ ಏನೂ ತಿಳಿದಿಲ್ಲವೆಂದು ಒವೈಸಿ ಪಕ್ಷ ಹೇಳಿಕೊಂಡಿದೆ.