ಪತ್ನಿ ಕೊಲೆಗೆ ಯತ್ನಿಸಿದ ಪತಿ ಬಂಧನ

ಸಾಂದರ್ಭಿಕ ಚಿತ್ರ

ದಾಂಡೇಲಿ : ತನ್ನ ತಾಯಿಯ ಜೊತೆ ಸೇರಿ ಪತ್ನಿಯ ಮೇಲೆ ಸೀಮೆಣ್ಣೆ ಸುರಿದು ಕೊಲೆ ಮಾಡಲೆತ್ನಿಸಿದ ಪತಿ ಬಾಂಬೇಚಾಳ ಟೌನ್ಶಿಪ್ ನಿವಾಸಿ ರಾಘವೇಂದ್ರ ಬಂಕಾಪುರನನ್ನು ನಗರ ಠಾಣೆಯ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮತ್ತೊಬ್ಬ ಆರೋಪಿ ಶಾರದಾ ಬಂಕಾಪುರ ಮಹಿಳೆಯಾಗಿದ್ದರಿಂದ ಆಕೆಯನ್ನು ಬಂಧಿಸದೇ ಬಿಡಲಾಗಿದ್ದು, ಆಕೆಯಿಂದ ಮುಚ್ಚಳಿಕೆ ಪಡೆಯುವ ಸಾಧ್ಯತೆಗಳಿದೆ. ಆಸ್ಪತ್ರೆಗೆ ದಾಖಲಾಗಿದ್ದ ರೇಖಾ ಸುಧಾರಿಸಿಕೊಂಡಿದ್ದು, ತವರುಮನೆಯವರು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆಂದು ತಿಳಿದುಬಂದಿದೆ.