ನೂರಾರು ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

ಸಾಂದರ್ಭಿಕ ಚಿತ್ರ

ಲಕ್ನೋ : ಶಹರನ್ಪುರದಲ್ಲಿ ಥಾಕೂರ್ ಸಮುದಾಯದ ಸದಸ್ಯರಿಂದ ದಲಿತರ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಭಟನಾರ್ಥವಾಗಿ ಇಲ್ಲಿನ ಹಲವಾರು ಮಕ್ಕಳ ಸಹಿತ ನೂರಾರು ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಜಿಲ್ಲೆಯ ಸಂತ ರವಿದಾಸ್ ಮಂದಿರದಲ್ಲಿ ಬುಧವಾರ ನಡೆದ ಸಮಾರಂಭವೊಂದರಲ್ಲಿ ನ್ಯಾಮು ಗ್ರಾಮದ ನೂರಾರು ದಲಿತರು ಬೌದ್ಧ ಸಂನ್ಯಾಸಿಗಳ ಉಪಸ್ಥಿತಿಯಲ್ಲಿ ಬೌದ್ಧ ಧರ್ಮ ಸೇರಿಕೊಂಡರು. ಮತಾಂತರ ಸಮಾರಂಭ ಮುಗಿದ ಬಳಿಕ ಈ ದಲಿತರು ಪ್ರಚಾರಾರ್ಥ ಗ್ರಾಮದಲ್ಲಿ ಮೆರವಣಿಗೆ ಕೊಂಡೊಯ್ದಾಗಲೇ ಈ ವಿಷಯ ಬೆಳಕಿಗೆ ಬಂದಿದೆ.