ಇಂದಿನಿಂದ ಹಂಬಲ್ ಪೊಲಿಟಿಷಿಯನ್ ಆಟ ಶುರು

ಚಿತ್ರ ಸೆಟ್ಟೇರಿದ ಲಾಗಾಯ್ತಿನಿಂದಲೂ ಸುದ್ದಿಯಲ್ಲಿದ್ದ `ಹಂಬಲ್ ಪೊಲಿಟಿಷಿಯನ್ ನೋಗರಾಜ್’ ತೆರೆಯ ಮೇಲೆ ರಾರಾಜಿಸಲು ಇಂದು ಬರುತ್ತಿದ್ದಾನೆ. ಬೆಂಗಳೂರಿನ ಪ್ರಸಿದ್ಧ ರೇಡಿಯೋ ಜಾಕಿ ಕಮ್ ಕಾಮಿಡಿಯನ್ ದಾನಿಶ್ ಶೇಟ್ ಒಂದು ದಿನ ತಾನು ಬೆಳ್ಳಿಪರದೆ ಮೇಲೂ ಮಿಂಚುತ್ತೇನೆ ಅಂದುಕೊಂಡಿರಲಿಲ್ಲವೇನೋ.. ಅವರೇ ಚಿತ್ರದ ಹೀರೋ ಆಗಿ ತೆರೆ ಮೇಲೆ ಬರಲಿದ್ದಾರೆ. ಇದೀಗ ದಾನಿಶ್ ಸೇಟ್ ತನ್ನ ಹಳೆಯ ಕಾಮಿಡಿ ವೀಡಿಯೋಗಳನ್ನೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾ ತನ್ನ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರೆ.  ತಾನು ರಾಜಕೀಯ ವಾತಾವರಣದಲ್ಲಿಯೇ ಬೆಳೆದಿದ್ದು ಚಿತ್ರದಲ್ಲಿ ನಟಿಸಲು ಸುಲಭವಾಯಿತು ಎನ್ನುತ್ತಾರೆ ದಾನಿಶ್.

ಸಾದ್‍ಖಾನ್ ನಿರ್ದೇಶನದ ಈ ಚಿತ್ರಕ್ಕೆ ದಾನಿಶ್ ಸೇಠ್, ಸಾದ್ ಖಾನ್, ವಂಶಿಧರ್ ಭೋಜರಾಜು ಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದ ತಾರಾಬಳಗದಲ್ಲಿ ದಾನಿಶ್ ಸೇಠ್, ವಿಜಯ್ ಚೆಂಡೂರ್, ಶ್ರುತಿ ಹರಿಹರನ್, ಸುಮುಖಿ ಸುರೇಶ್, ರೋಜರ್ ನಾರಾಯಣ್ ಮುಂತಾದವರಿದ್ದಾರೆ.

ಈ ಸಿನಿಮಾ ಶುದ್ಧ ಹಾಸ್ಯದಿಂದ ಕೂಡಿದ ಚಿತ್ರವಾಗಿದೆ ಎನ್ನುತ್ತಾರೆ ನಿರ್ದೇಶಕ ಸಾದ್ ಖಾನ್. ಜೊತೆಗೇ ಕೆಟ್ಟ ಹಾಸ್ಯದಿಂದ ಈ ಚಿತ್ರ ಬಹು ದೂರ ಎನ್ನುವ ಸ್ಪಷ್ಟನೆಯನ್ನೂ ನೀಡಿದ್ದಾರೆ.

LEAVE A REPLY