ಕೋಮುವಾದ ವಿರೋಧಿಸಿ ಜನವರಿ 20ರಂದು ಸಿಪಿಎಂ ಪ್ರಾಯೋಜಿತ ಮಾನವ ಸರಪಳಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸೌಹಾರ್ದ ಕರ್ನಾಟಕದ ಉದ್ದೇಶದ ಹಿನ್ನೆಲೆಯಲ್ಲಿ ಸಿಪಿಎಂ ಜನವರಿ 20ರಂದು ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮವು ಜಿಲ್ಲೆಯ ಮುಲ್ಕಿಯಿಂದ ಆರಂಭಿಸಿ ಸುಳ್ಯದ ಕಲ್ಲಗುಂಡಿಯವರೆಗೆ ನಡೆಯಲಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗ ಳೊಂದಿಗೆ ಮಾತನಾಡಿದ ಅವರು, ಅದೇ ದಿನ ಸಂಜೆ ಮೂರು ಗಂಟೆಗೆ ಜಿಲ್ಲೆಯ ಜಿಲ್ಲೆಯ ಪ್ರಮುಖ ಪೇಟೆಗಳಲ್ಲಿ ಸಮಾವೇಶಗೊಂಡು ಬಳಿಕ ಸಂಜೆ 4ರಿಂದ 4.15ರವರೆಗೆ ಮಾನವ ಸರಪಳಿ ರೂಪುಗೊಳ್ಳಲಿದೆ. ಮಠಾಧೀಶರು, ಸಾಹಿತಿಗಳು, ಬರಹಗಾರರು ಹಾಗೂ ಕಲಾವಿದರು ಕೂಡಾ ಈ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ದೀಪಕ್ ರಾವ್ ಹಾಗೂ ಬಶೀರ್ ಹತ್ಯೆಯನ್ನು ಪಕ್ಷ ಖಂಡಿಸುತ್ತದೆ ಎಂದ ಅವರು, ಹಿಂದೂ ಕೋಮುವಾದ ಹಾಗೂ ಮುಸ್ಲಿಂ ಮೂಲಭೂತವಾದ ಒಂದಕ್ಕೊಂದು ಪೆÇೀಣಿಸಿಕೊಂಡು ರಾಜಕೀಯವಾಗಿ ಬೆಳೆಯಲು ನಡೆಸುವ ಕೊಲೆಗಡುಕ ರಾಜಕೀಯವನ್ನು ಜನತೆ ವಿರೋಧಿಸಬೇಕಾಗಿದೆ. ಕೊಲೆ ಕೃತ್ಯಕ್ಕೆ ಸಂಬಂಧಿಸಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಆದರೆ ಇದರ ಹಿಂದಿರುವ ಸೂತ್ರಧಾರಿಗಳನ್ನೂ ಬಂಧಿಸಬೇಕಾಗಿದೆ ಎಂದರು. ಜಿಲ್ಲೆಯಲ್ಲಿ ಕೋಮು ಪ್ರಚೋದಕ ಮಾತುಗಳ ಮೂಲಕ ಹಿಂಸೆಗೆ ಕಾರಣವಾಗುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶೋಭಾ ಕರಂದ್ಲಾಜೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮೂಡಬಿದ್ರೆಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ದಾಳಿಗಳ ಬಗ್ಗೆ ಪ್ರಬಲ ಹೋರಾಟ ಹಾಗೂ ಚುನಾವಣಾ ರಾಜಕೀಯ ಬಿಟ್ಟು ಮಹಾದಾಯಿ ವಿವಾದ ಬಗೆಹರಿಸಲು ಆಗ್ರಹಿಸಿ ನಿರ್ಣಯಿಸಲಾಗಿದೆ.

ಮತಾಂಧ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲು ಗೂಂಡಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಈ ಕೃತ್ಯಕ್ಕೆ ಕಾರಣವಾದ ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜನಸಾಮಾನ್ಯರಿಗೂ ನೆಮ್ಮದಿಯಿಂದ ಬದುಕುವಂತಾಗಲು ಶಾಂತಿಯ ವಾತಾವರಣ ಸೃಷ್ಟಿಯಾಗಬೇಕಾಗಿದೆ. ಜಿಲ್ಲೆಯಲ್ಲಿ ಶೈಕ್ಷಣಿ, ಪ್ರವಾಸೋದ್ಯಮ, ಬ್ಯಾಂಕಿಂಗ್ ವ್ಯವಸ್ಥೆ ಬೆಳೆಯಬೇಕಾಗಿದೆ ಎಂದರು.

 

LEAVE A REPLY