ನೀರು ಸಂರಕ್ಷಣಾ ಅಭಿಯಾನಕ್ಕಾಗಿ ಎಳೆಯ ಮಕ್ಕಳಿಂದ ಮಾನವ ಸರಪಳಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿಯ ಎಳೆಯ ಮಕ್ಕಳು `ನೀರು ಉಳಿಸಿ ಜೀವ ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ಎಇಲ್ಲಿನ ಕ್ಲಾಕ್ ಟವರ್ ಸಮೀಪ ಮಾನವ ಸರಪಳಿಯನ್ನು ನಿರ್ಮಿಸಿ ನೀರು ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಜಮಾತೆಜಿ ಇ ಇಸ್ಲಾಮಿ ಹಿಂದ್ ಸಂಘಟನೆಯ ಮಹಿಳಾ ಬಣವು ಎಪ್ರಿಲ್ 17ರಿಂದ 22 ರವರೆಗೆ ನಡೆಸಿದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಸುಮಾರು 130ಕ್ಕೂ ಅಧಿಕ ಮಕ್ಕಳನ್ನು ಒಳಗೊಂಡಿದ್ದ ಗುಲ್ಷನ್ ಎಂಬ ಹೆಸರಿನ ಗುಂಪು ಈ ಮಾನವ ಸರಪಳಿಯನ್ನು ನಿರ್ಮಿಸಿತ್ತು.

ಈ ಸಂದರ್ಭ ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಬಣದ ಸಂಚಾಲಕಿ ನವಿದಾ ಹಸೈನ್ ಆಸಾದಿ, ಅಧ್ಯಕ್ಷೆ ಶಹಿದಾ ರಿಯಾಝ್, ಸಾದಿಕಾ, ನೆಹರುನ್ನೀಸಾ, ಅಬ್ದುಲ್ ಅಝೀಜ್, ಮರಿಯ ಮತ್ತು ಇತರರು ಉಪಸ್ಥಿತರಿದ್ದರು.