ರಜನಿ ಚಿತ್ರದಲ್ಲಿ ಹುಮಾ ಖುರೇಶಿ

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸಲು ಬಾಲಿವುಡ್ಡಿನ ಸ್ಟಾರ್ ನಟಿಯರೂ ತುದಿಗಾಲಲ್ಲಿ ನಿಂತಿರುತ್ತಾರೆ. ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ರಾಧಿಕಾ ಆಪ್ಟೆ, ಸೊನಾಕ್ಷಿ ಸಿನ್ಹಾ ಈಗಾಗಲೇ ರಜನಿ ಜೊತೆ ನಟಿಸಿದ್ದರು. ಈಗ ಇನ್ನೊಬ್ಬ ಬಾಲಿವುಡ್ ನಟಿ ರಜನಿಕಾಂತ್ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗುತ್ತಿದ್ದಾಳೆ. ರಜನಿ ಅಳಿಯ ಧನುಷ್ ತಮ್ಮ ಹೋಮ್ ಬ್ಯಾನರಿನಡಿಯಲ್ಲಿ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಹುಮಾ ಖುರೇಶಿ ಆಯ್ಕೆಯಾಗಿದ್ದಾಳೆ.

“ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ತೆರೆಹಂಚಿಕೊಳ್ಳುತ್ತಿರುವ ಹುಮಾ ಖುರೇಶಿಯಲ್ಲಿ ಪಾತ್ರಕ್ಕೆ ಬೇಕಾದ ಎಲ್ಲಾ ಗುಣಗಳೂ ಇರುವುದರಿಂದ ಆಕೆಯೇ ಈ ಪಾತ್ರದಲ್ಲಿ ನಟಿಸಲು ಸರಿಯಾದ ಆಯ್ಕೆ” ಎನ್ನುವುದು ಚಿತ್ರತಂಡದ ಮಾತು. ಪಿ ಎ ರಂಜಿತ್ ನಿರ್ದೇಶಿಸಲಿರುವ ಈ ಸಿನಿಮಾದ ಶೂಟಿಂಗ್ ಈ ತಿಂಗಳ ಕೊನೆಯಿಂದ ಪ್ರಾರಂಭವಾಗಲಿದೆ.

ಅಂದ ಹಾಗೆ ಹುಮಾ ಖುರೇಶಿ ಅನುರಾಗ್ ಕಶ್ಯಪರ `ಗ್ಯಾಂಗ್ ಆಫ್ ವಸೀಫರ್’ ಚಿತ್ರದ ಮೂಲಕ ಬಾಲಿವುಡ್ಡಿಗೆ ಪಾದಾರ್ಪಣೆ ಮಾಡಿದ್ದು ತದನಂತರ ಕೆಲವು ಪವರ್ ಫುಲ್ ಪಾತ್ರದಲ್ಲಿ ನಟಿಸಿದ್ದಳು.