ಮುಂದಿನ ಕೇಂದ್ರ ಬಜೆಟ್ಟಿನಲ್ಲಿ ಭಾರೀ ತೆರಿಗೆ ವಿನಾಯತಿ ?

ನವದೆಹಲಿ : ಮಧ್ಯಮ ವರ್ಗದ ಜನತೆ 2018ರ ಕೇಂದ್ರ ಬಜೆಟ್ಟಿನಲ್ಲಿ ದೊಡ್ಡ ಪ್ರಮಾಣದ ತೆರಿಗೆ ವಿನಾಯತಿ ನಿರೀಕ್ಷಿಸಬಹುದಾಗಿದೆ. ಮುಂದಿನ ಲೋಕಸಭೆಗೆ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಂತಿಮ ಬಜೆಟ್ ಇದಾಗಲಿದೆ. ಮುಂದಿನ ಬಜೆಟ್ಟಿನಲ್ಲಿ ವೈಯಕ್ತಿಕ ತೆರಿಗೆಯಲ್ಲಿ ವಿನಾಯತಿ ನೀಡಲು ಕೇಂದ್ರ ವಿತ್ತ ಸಚಿವಾಲಯ ಆಲೋಚಿಸಿದೆ ಎಂದು ವಿಶ್ವಸನೀಯ ಮೂಲವೊಂದು ಹೇಳಿದೆ. ತೆರಿಗೆ ವಿನಾಯತಿ ಹೆಚ್ಚಳದಲ್ಲಿ ಐದು ಲಕ್ಷ ರೂ ಸಾಧ್ಯವಾಗದಿದ್ದಲ್ಲಿ ಮೂರು ಲಕ್ಷ ರೂ ಆಗಲಿದೆ. ಸದ್ಯ 2.5 ಲಕ್ಷ ರೂ ಮೊತ್ತದವರೆಗೆ ತೆರಿಗೆ ವಿನಾಯತಿ ಇದೆ.

LEAVE A REPLY