ಮತ್ತೆ ಜೊತೆಯಾಗುತ್ತಿರುವ ಹೃತಿಕ್, ಪ್ರಿಯಾಂಕ

`ಕ್ರಿಶ್ 4′ ಸಿನಿಮಾದ  ಹೀರೋಯಿನ್ ಆಗಿ ಈ ಮೊದಲು ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಪರಿಣಿತಿ ಚೋಪ್ರಾ ಹೆಸರುಗಳು ಕೇಳಿ ಬಂದಿದ್ದವು. ಆದರೆ ಈಗ ಪ್ರಿಯಾಂಕಾ ಹೆಸರು ಕೇಳಿ ಬರುತ್ತಿದೆ. `ಕ್ರಿಶ್ 4′ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಹೃತಿಕ್ ಜೊತೆ ತೆರೆಹಂಚಿಕೊಳ್ಳುತ್ತಾಳೆ ಎನ್ನಲಾಗುತ್ತಿದೆ. ಹೃತಿಕ್ ರೋಷನ್ ಅಭಿನಯದ `ಕಾಬಿಲ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದರ ಬೆನ್ನಲ್ಲೇ `ಕ್ರಿಶ್ 4′ ಚಿತ್ರ ಸೆಟ್ಟೇರಲು ಸಿದ್ಧತೆಗಳು ನಡೆಯುತ್ತಿವೆ.

ಸ್ವತಃ ಹೃತಿಕ್ ರೋಷನ್, ಪ್ರಿಯಾಂಕ ಜೊತೆ ಫೆÇೀನ್ ಮಾಡಿ ಮಾತುಕತೆ ನಡೆಸಿದ್ದು, ಇವರಿಬ್ಬರು ಮಾಡಿದ ಎಲ್ಲ ಚಿತ್ರಗಳೂ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿವೆ. ಹಾಗಾಗಿ ಮುಂದಿನ ಚಿತ್ರವನ್ನೂ ಒಟ್ಟಿಗೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾನಂತೆ ಹೃತಿಕ್. ಮೂಲದ ಪ್ರಕಾರ ಪ್ರಿಯಾಂಕಾಳೂ ಇದಕ್ಕೆ ಓಕೆ ಎಂದಿದ್ದಾಳೆಯಂತೆ.