ಭಾರತವು ಡಿಜಿಟಲ್ ಆಗುವುದರಿಂದ ಸಾಮಾನ್ಯ ಜನರಿಗೆ ಏನು ಪ್ರಯೋಜನ

ಇದೆಲ್ಲ ಯಾರಿಗೆ ಸ್ವಾಮಿ  ಶ್ರೀಮಂತರಿಗೆ ಮಾತ್ರ. ಬಡದೇಶ ಭಾರತಕ್ಕೆ ಇದೆಲ್ಲ ಬೇಕಾ  ಕೂಲಿ ಕಾರ್ಮಿಕರು, ಬಡ ಕಾರ್ಮಿಕರಿಗೆ, ಮೀನುಗಾರರು ಹೀಗೆ ತಮ್ಮ ಜೀವನೋಪಾಯಕ್ಕಾಗಿ ದುಡಿದು ತಿನ್ನುವವರಾದ ಬಡಪಾಯಿಗೆ ಈ ಡಿಜಿಟಲ್ ಎಂಬ ಮಾಯಜಾಲದ ಉಂಗುರ ಯಾಕೆ   ನೋಟು ಬ್ಯಾನ್ ಜನಸಾಮಾನ್ಯರ ಬಡವರ ಮಧ್ಯಮ ವರ್ಗದವರ ಮೇಲೆ ಬೀರಿದ ಗದಾಪ್ರಹಾರದಿಂದ ಇನ್ನೂ ಈ ಜನರು ಇನ್ನು ಮೇಲೆ ಏಳಲಿಲ್ಲ. ಇನ್ನು ರೈತರು ಕೃಷಿಕರು, ತೊಳಲಾಡುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಬಡಜನರಿಗೆ ಬೇಕಾದ್ದು ಬೆಲೆಯೇರಿಕೆ ನಿಯಂತ್ರಣ. ಈಗ ಆಗಿರುವುದು ಎಲ್ಲ ಉಲ್ಟಾ  ಬೇಕೆ ನಮಗೆ ಡಿಜಿಟಲ್ ಎಂಬ ಮಾಯಜಾಲ

  • ಟಿ ಮುರಾರಿ ಪುತ್ತೂರು