ಕೊಹ್ಲಿಯ ವೃತ್ತಿ ಜೀವನವನ್ನು ಧೋನಿ ಕಾಪಾಡಿದ್ದು ಹೇಗೆ ?

ಮಹೇಂದ್ರ ಸಿಂಗ್ ಧೋನಿ ಕೇವಲ ಒಬ್ಬ ನಾಯಕ ಮಾತ್ರವಲ್ಲ ಆತನ ಉತ್ತರಾಧಿಕಾರಿ ವಿರಾಟ್ ಕೊಹ್ಲಿಯ ಸಂರಕ್ಷನಾಗಿಯೂ ಪಾತ್ರ ನಿರ್ವಹಿಸಿದ್ದಾರೆ

`ನಾನು ಒಬ್ಬ ಕ್ರಿಕೆಟಿಗನಾಗಿ ಬೆಳೆಯಲು ಆತ ನನಗೆ ಸಾಕಷ್ಟು ಕಾಲ ಮತ್ತು ಸಮಯಾವಕಾಶ ನೀಡಿದ್ದಾರೆ. ಹಲವು ಬಾರಿ ನಾನು ತಂಡದಿಂದ ಕೆಳಕ್ಕುರುಳಲಿದ್ದರೂ ನನ್ನನ್ನು ಅದರಿಂದ ಕಾಪಾಡಿದ್ದಾರೆ” ಇದು ಶನಿವಾರ  ಧೋನಿಯ ಬಗ್ಗೆ ಕೊಹ್ಲಿಯ ಬಾಯಿಂದ ಹೊರಟ ಅಭಿಮಾನದ ಮಾತುಗಳು.

ಕೊಹ್ಲಿ 2008 ರಲ್ಲಿ ಶ್ರೀಲಂಕಾ ಒಡಿಐ ಪ್ರವೇಶದ ಬಳಿಕ ತನ್ನ ಎಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಧೋನಿಯ ನಾಯಕತ್ವದಡಿಯಲ್ಲಿಯೇ ಆಡಿದ್ದಾರೆ.

ಪ್ರಾರಂಭದಲ್ಲಿ ಎರಡು ಒಡಿಐಗಳು ಮತ್ತು ಟೆಸ್ಟಗಳಲ್ಲಿ ಕೊಹ್ಲಿಯ ಪಾತ್ರ ಒಬ್ಬ ಸ್ಥಿರ ಮತ್ತು ಸುರಕ್ಷಿತ  ಆಟಗಾರನ ಸ್ಥಾನಕ್ಕೆ ಏರುವಂತೆ ಮಾಡಲಿಲ್ಲ, ಇದೇ ವೇಳೆ ಧೋನಿ ಆತನ ಪ್ರತಿಭೆ ಮತ್ತು ಸಾಮಥ್ರ್ಯಗಳಲ್ಲಿ ನಂಬಿಕೆಯನ್ನು ತುಂಬಿಸಿದ್ದರು. “ನನಗೆ ಸಲಹೆ ನೀಡಿ, ಅವಕಾಶಗಳನ್ನು ನೀಡುತ್ತಿದ್ದ ವ್ಯಕ್ತಿ ಧೋನಿ” ಎಂದು ಕೊಹ್ಲಿ ಹೇಳಿದ್ದಾರೆ. “ಧೋನಿಯ ಬಗ್ಗೆ ಯೋಚಿಸುವಾಗ ಮೊದಲಿಗೆ ಮನಸ್ಸಿನಲ್ಲಿ ಬರುವ ಮೊದಲ ಶಬ್ಧ ಕ್ಯಾಪ್ಟನ್. ಇತರ ಯಾವುದೇ ರೀತಿಯಲ್ಲಿ ಧೋನಿಯನ್ನು ಕಲ್ಪಿಸಲು ಸಾಧ್ಯವಿಲ್ಲ. ನನಗೆ ಯಾವಾಗಲು ಆತ ನನ್ನ ಕ್ಯಾಪ್ಟನ್” ಎಂದು ಕೊಹ್ಲಿ ಹೇಳಿದ್ದಾರೆ.

ಬುಧವಾರ ಧೋನಿ ಒಡಿಐ ಮತ್ತು ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ಆಯ್ಕೆ ಸಮಿತಿಯ ಹಿರಿಯ ಅಧಿಕಾರಿಗಳು ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದ್ದಾರೆ. ಕೊಹ್ಲಿಯ ಹೊಸ ಅಧ್ಯಾಯ ಇಂಗ್ಲೆಂಡ್ ವಿರುದ್ದ ಲಿಮಿಟೆಡ್ ಓವರುಗಳ ಸಿಕ್ಸ್ ಮ್ಯಾಜ್ ಸೀರೀಸ್ ಪುಣೆಯಲ್ಲಿ ಜನವರಿ 15 ರಂದು ಆರಂಭವಾಗಲಿದೆ.