ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ್ದು ಹೇಗೆ ?

ಸಾಮಾಜಿಕ ಜಾಲತಾಣ ಸಕ್ರಿಯತೆಯಲ್ಲಿ ಬಿಜೆಪಿಯನ್ನು ಸರಿಗಟ್ಟಲು ಕಾಂಗ್ರೆಸ್ ಅದಮ್ಯ ಉತ್ಸಾಹದಿಂದ ನಡೆಸುತ್ತಿರುವ ಪ್ರಯತ್ನಗಳ ಹಿಂದಿನ

ಪ್ರೇರಕ ಶಕ್ತಿಯೇ ದಿವ್ಯ ಸ್ಪಂದನ ಎಂಬ ಮೂಲ ಹೆಸರನ್ನು ಹೊಂದಿರುವ ಜನಪ್ರಿಯ ನಟಿ-ರಾಜಕಾರಣಿ ಹಾಗೂ ಮಂಡ್ಯದ ಮಾಜಿ ಸಂಸದೆ ರಮ್ಯಾ.

ತೀರಾ ಇತ್ತೀಚಿಗಿನವರೆಗೂ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವೇ ಇದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಕೆಲ ತಿಂಗಳುಗಳಿಂದೀಚೆಗೆ ಸಾಮಾಜಿಕ ಜಾಲತಾಣಗಳಿಗೆ ವಸ್ತುಶಃ ಲಗ್ಗೆಯಿಟ್ಟಿದಾರೆ. ಇದೀಗ ಅವರು ಒಂದು ಅಧಿಕೃತ ಹಾಗೂ ವೈಯಕ್ತಿಕ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಸಕ್ರಿಯರಾಗಿದ್ದಾರಲ್ಲದೆ ಮತದಾರರ ಜತೆ ನೇರ ಸಂವಹನಕ್ಕೆ ಒಂದು ಆ್ಯಪ್ ಕೂಡ ಹೊಂದಿದ್ದಾರೆ. ಅವರ ಭಾಷಣಗಳನ್ನು ಫೇಸ್ಬುಕ್ ಮುಖಾಂತರ ಬಿತ್ತರಿಸಲಾಗುತ್ತದೆ. ಗುಜರಾತ್ ಚುನಾವಣೆಯ ಸಂದರ್ಭ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ತನ್ನನ್ನು ತೊಡಗಿಸಿಕೊಂಡಿತ್ತೆಂದರೆ ಅದರ ಪರಿಣಾಮ ಕರ್ನಾಟಕಕ್ಕೂ ತಟ್ಟಿದೆ.

ಸಾಮಾಜಿಕ ಜಾಲತಾಣ ಸಕ್ರಿಯತೆಯಲ್ಲಿ ಬಿಜೆಪಿಯನ್ನು ಸರಿಗಟ್ಟಲು ಕಾಂಗ್ರೆಸ್ ಅದಮ್ಯ ಉತ್ಸಾಹದಿಂದ ನಡೆಸುತ್ತಿರುವ ಪ್ರಯತ್ನಗಳ ಹಿಂದಿನ ಪ್ರೇರಕ ಶಕ್ತಿಯೇ ದಿವ್ಯ ಸ್ಪಂದನ ಎಂಬ ಮೂಲ ಹೆಸರನ್ನು ಹೊಂದಿರುವ ಜನಪ್ರಿಯ ನಟಿ-ರಾಜಕಾರಣಿ ಹಾಗೂ ಮಂಡ್ಯದ ಮಾಜಿ ಸಂಸದೆ ರಮ್ಯಾ.

ಟ್ವಿಟ್ಟರಿನಲ್ಲಿ ಬಹಳಷ್ಟು ಸಕ್ರಿಯರಾಗಿರುವ ಹಾಗೂ ಬಿಜೆಪಿಯನ್ನು ಕಟುವಾಗಿ ಟೀಕಿಸುವ ರಮ್ಯಾ 2014ರ ಚುನಾವಣೆಯಲ್ಲಿ ಮಂಡ್ಯದಿಂದ ಸೋತಿದ್ದರೂ ಮೇ 2017ರಲ್ಲಿ ಅವರನ್ನು ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆಯನ್ನಾಗಿ ನೇಮಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಛಾಪು ಮೂಡಿಸಿದೆಯೆಂದಾದರೆ ಅದರ ಹಿಂದೆ ರಮ್ಯಾ ಮತ್ತವರ ತಂಡದ ಶ್ರಮವಿದೆ.

ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರನ್ನೂ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವುದು ತಮ್ಮ ಮುಂದಿರುವ ಮೊದಲ ಸವಾಲು, ಈ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿದೆ ಎನ್ನುತ್ತಾರೆ ರಮ್ಯಾ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಈಗ ಜನತೆಯನ್ನು ಆನ್ಲೈನ್ ಮೂಲಕ ತಲುಪಿದ್ದಾರೆಂಬುದು ರಮ್ಯಾಗೆ ಸಂತಸ ನೀಡಿದೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ರಮ್ಯಾ ಮತ್ತವರ ತಂಡ ಮಾಡಬೇಕಾಗಿರುವ ಕೆಲಸ ಇನ್ನೂ ಬಹಳಷ್ಟಿದೆ. “ಮತದಾರರ ಜತೆಗೆ ಅವರ ಭಾಷೆಗಳಲ್ಲಿಯೇ ಸಂಪರ್ಕ ಸಾಧಿಸುವ ಉತ್ಸಾಹಿ ತಂಡಗಳನ್ನು ನೇಮಿಸುವ ಅಗತ್ಯವಿದೆ. ಇದು ದಿನದ 24 ಗಂಟೆಯೂ ಮಾಡಬೇಕಾದ ಕೆಲಸ, ಪ್ರತಿ ಕ್ಷಣ ನಮ್ಮ ಕಾರ್ಯತಂತ್ರ ಸಿದ್ಧವಾಗಬೇಕಿದೆ, ಮಾತುಕತೆಗಳಲ್ಲಿ ಹಾಗೂ ಸುದ್ದಿ ವಲಯಗಳಲ್ಲಿ ನಾವೇ ಮೇಲುಗೈ ಸಾಧಿಸಬೇಕು” ಎನ್ನುತ್ತಾರೆ ರಮ್ಯಾ.

ಮಹಿಳೆಯರ ತಂಡ ತಮ್ಮ ತಂಡದಲ್ಲಿ ಹೆಚ್ಚಿನವರು ಯುವತಿಯರು ಎಂದು ಬಹಿರಂಗಪಡಿಸುವ ರಮ್ಯಾ, ಅದೇ ಸಮಯ ಎಷ್ಟು ಮಂದಿಯಿದ್ದಾರೆಂದು ತಿಳಿಸಲು ಮನಸ್ಸು ಮಾಡಿಲ್ಲ. ತಮ್ಮ ತಂಡದಲ್ಲಿ ಜಾಹೀರಾತು ಕ್ಷೇತ್ರದ ಹಲವಾರು ಕಾಪಿರೈಟರುಗಳು, ಗ್ರಾಫಿಕ್ ಡಿಸೈನರುಗಳು ಹಾಗೂ ಕಂಟೆಂಟ್ ಬರಹಗಾರರಿದ್ದಾರೆ ಎಂದು ಅವರು ಮಾಹಿತಿ ನೀಡುತ್ತಾರೆ. ಹ್ಯಾಶ್ ಟ್ಯಾಗ್ ಏಯ್ನ್ಟ್ ನೋ ಸಿಂಡ್ರೆಲ್ಲಾ ತಮಗೆ ಆರಂಭಿಕ ಯಶಸ್ಸು ತಂದಿತ್ತೆಂದು ವಿವರಿಸುವ ರಮ್ಯಾ ಚಂಡೀಗಢದ ಡೀಜೆ ವರ್ಣಿಕಾ ಕುಂದು ತಡ ರಾತ್ರಿ ಮನೆಯಿಂದ ಹೊರಗಿದ್ದುದೇ ಆಕೆಗೆ ಕಿರುಕುಳವಾಗಲು ಕಾರಣವೆಂಬ ಬಿಜೆಪಿ ರಾಜಕಾರಣಿಯೊಬ್ಬರ ಹೇಳಿಕೆಗೆ ಪ್ರತಿಯಾಗಿ ಈ ಆನ್ಲೈನ್ ಅಭಿಯಾನ ನಡೆದಿತ್ತು ಎನ್ನುತ್ತಾರೆ.

ಒಂದು ಘೋಷವಾಕ್ಯದ ಹಿಂದೆ ಗುಜರಾತ್ ಚಉನಾವಣೆಯ ಸಂದರ್ಭ “ವಿಕಾಸ್ ಗಾಂಡೊ ಥಯ್ಯೋ ಚೆ” ಎಂಬ ಘೋಷವಾಕ್ಯ ಕಾಂಗ್ರೆಸ್ ಸಾಮಾಜಿಕ ತಾಣ ಘಟಕದ ಮೂಲಕ ಅದೆಷ್ಟು ವೈರಲ್ ಆಗಿತ್ತೆಂದರೆ ಬಿಜೆಪಿ ನಾಯಕರೂ ಅದರ ಬಗ್ಗೆ ತಲೆಕೆಡಿಸಿಕೊಂಡಿದ್ದು ಸ್ಪಷ್ಟವಾಗಿತ್ತು.

“ಆಂತರಿಕ ವಾಟ್ಸಪ್ ಗ್ರೂಪ್ ಒಂದರಲ್ಲಿ  ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬ ಬುಲೆಟ್ ಟ್ರೈನ್ ಬಗೆಗಿನ ವರದಿಯೊಂದರ ಬಗ್ಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದ. ನಾವು ಅದನ್ನು ಅನುವಾದಿಸಿದೆವು “ಡೆವಲಪ್ಮೆಂಟ್ ಹ್ಯಾಸ್ ಗಾನ್ ಕ್ರೇಝಿ’ –  ನಂತರ ಅದು ತಾನಾಗಿಯೇ ಜನಪ್ರಿಯವಾಗಿ ವೈರಲ್ ಆಯಿತು” ಎಂದು ರಮ್ಯಾ ವಿವರಿಸುತ್ತಾರೆ. “ಕಾಂಗ್ರೆಸ್ ವಾಟ್ಸಪ್ ಮೂಲಕ ಕಳುಹಿಸುವುದನ್ನು ನಂಬಬಾರದೆಂದು ಮುಂದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಯುವಜನತೆಗೆ ಕರೆ ನೀಡಿರುವುದು ಈ ಅಭಿಯಾನ ಪರಿಣಾಮಕಾರಿಯಾಗಿರುವುದರ ದ್ಯೋತಕ” ಎಂದು ರಮ್ಯಾ ಹೇಳುತ್ತಾರೆ. ಒಂದರ್ಥದಲ್ಲಿ ಇದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಕಠಿಣ ಸವಾಲೊಡ್ಡಿದ ಮೊದಲ ಪ್ರಸಂಗವಾಗಿತ್ತು.

ಕಾಂಗ್ರೆಸ್ ಪಕ್ಷವು ಗುಜರಾತ್ ಅಭಿವೃದ್ಧಿ ಮಾದರಿಯನ್ನು ಹಲವಾರು ಸರಕಾರಿ ಅಂಕಿಸಂಖ್ಯೆಗಳ ಆಧಾರದಲ್ಲಿ “ವಿಕಾಸ್ ಗಾಂಡೋ ಥಯ್ಯೋ ಚೇ” ಮೂಲಕ ಬಹಿರಂಗಗೊಳಿಸಿತ್ತು.

ಸಂದೇಶಗಳು ಹಾಗೂ ವೈರಲ್ ಅಭಿಯಾನಗಳು ತನ್ನಿಂತಾನಾಗಿಯೇ ನಡೆಯುವುದಾದರೂ ಅವುಗಳ ಹಿಂದಿರುವ ಯೋಜನಾಬದ್ಧ ನಿರ್ವಹಣೆ ಯನ್ನು ಅಲ್ಲಗಳೆಯಲಾಗದು ಎಂದು ರಮ್ಯಾ ಹೇಳುತ್ತಾರೆ.

ಪಕ್ಷದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ @ ಐ ಎನ್ ಸಿ ಇಂಡಿಯಾ ಇದರತ್ತ ಗಮನ ಹರಿಸಿದಾಗ ಹೆಚ್ಚಿನ ಟ್ವೀಟುಗಳು ಕೇಂದ್ರದ ಬಿಜೆಪಿಯ ಟ್ವೀಟುಗಳಿಗೆ ಪ್ರತ್ಯುತ್ತರದ ರೂಪದಲ್ಲಿದೆಯೆಂಬುದು ಸ್ಪಷ್ಟ. “ವಾಸ್ತವಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿಗಳನ್ನು ಹುಡುಕುವವರು ನಮ್ಮ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಪಕ್ಷ ನನ್ನನ್ನು ಸಾಮಾಜಿಕ ಜಾಲತಾಣ ಮುಖ್ಯಸ್ಥೆಯನ್ನಾಗಿ ಆರಿಸಿದಾಗ ರಾಹುಲ್ ಗಾಂಧಿ ನನಗಿತ್ತ ಒಂದೇ ಸಲಹೆ, ಸತ್ಯಕ್ಕೆ ಅಂಟಿಕೊಳ್ಳಿ, ಸತ್ಯವಲ್ಲದೆ ಬೇರಿನ್ನೇನಲ್ಲ” ಎಂಬುದನ್ನು ರಮ್ಯಾ ನೆನಪಿಸಿಕೊಳ್ಳುತ್ತಾರೆ.

ರಾಹುಲ್ ಅವರು ಇತ್ತೀಚೆಗೆ ಉಪಯೋಗಿಸಿದ ಪದಗಳಾದ ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಗೂ ಜೈಟ್ ಲೈ ಬಹಳಷ್ಟು ಜನಪ್ರಿಯವಾಗಿತ್ತಲ್ಲದೆ ಈ ಮೂಲಕ ರಾಹುಲ್ ಬಿಜೆಪಿಯನ್ನು ಅದರ ಆಟದಲ್ಲಿಯೇ ಸೋಲಿಸಲು ಯತ್ನಿಸಿದ್ದಾರೆಂಬುದನ್ನು ಇಲ್ಲಿ ಸ್ಮರಿಸಬಹುದು.

“ರಾಹುಲ್ ಗಾಂಧಿ ಹಿಂದಿನಂತೆಯೇ ಇದ್ದಾರೆ, ಅವರಲ್ಲೇನೂ ಬದಲಾವಣೆಯಾಗಿಲ್ಲ. ಅವರ ಸಮಕಾಲೀನ ನಾಯಕರಿಗಿಂತ ಅವರು ಬಹಳಷ್ಟು ಮುಂದಿದ್ದಾರೆ. ಮೂರು ವರ್ಷಗಳ ಮೋದಿ ಆಡಳಿತದಿಂದಾಗಿ ಜನರು ರಾಹುಲ್ ಅವರ ಬಗೆಗಿನ ತಮ್ಮ ಭಾವನೆಗಳನ್ನು ಬದಲಾಯಿಸಿದ್ದಾರೆ” ಎಂದು ರಮ್ಯಾ ಹೇಳುತ್ತಾರೆ.

ಸಾಮಾಜಿಕ ಜಾಲತಾಣಗಳು ಹೆಚ್ಚೆಚ್ಚು ಗ್ರಾಮೀಣ ಜನತೆಯನ್ನು ತಲುಪಬೇಕು ಎಂಬುದು ರಮ್ಯಾ ಆಶಯ. ಅವರ ರಾಜಕೀಯ  ಗುರುವೆಂದೇ ತಿಳಿಯಲಾದ ಎಸ್ ಎಂ ಕೃಷ್ಟ  ಬಿಜೆಪಿಗೆ ಸೇರಿರುವುದು ಹಾಗೂ ರಮ್ಯಾ ಹೇಗೆ ಕಾರ್ಯನಿರ್ವಹಿಸಬಹುದೆಂಬ ಬಗ್ಗೆ ಆರಂಭದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರುಗಳಿಗಿದ್ದ ಆತಂಕ ಈಗ ಮರೆಯಾಗಿ ಅವರು ಕಾಂಗ್ರೆಸ್ ನಾಯಕರುಗಳ ವಿಶ್ವಾಸ ಸಂಪಾದಿಸಿದ್ದಾರೆ.

ಆದರೂ ಫಾಲೋವರ್ಸ್ ಸಂಖ್ಯೆಯನ್ನು ಗಮನಿಸಿದಾಗ ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ಎಎಪಿಗಿಂತಲೂ ಹಿಂದಿದೆ. ಬಿಜೆಪಿಯ ಟ್ವಿಟ್ಟರ್ ಖಾತೆಗೆ 85.9 ಲಕ್ಷ ಫಾಲೋವರ್ಸ್ ಇದ್ದರೆ, ಎಎಪಿಗೆ 44.9 ಲಕ್ಷ ಫಾಲೋವರ್ಸ್ ಇದ್ದಾರೆ. ಆದರೆ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆ ಫಾಲೋವರ್ಸ್ ಸಂಖ್ಯೆ 38.2 ಲಕ್ಷ ಆಗಿದೆ.

 

LEAVE A REPLY