ಪ್ಲಾಸಿಕ್ಟ್ ನಿಷೇಧಿಸದಿದ್ದರೆ ಸ್ವಚ್ಛತಾ ಅಭಿಯಾನ ಯಶಸ್ವಿ ಹೇಗೆ ಸಾಧ್ಯ

ವರ್ಷದ ಹಿಂದೆಯೇ ರಾಜ್ಯದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿ ಕಾನೂನು ಮಾಡಲಾಗಿತ್ತು. ರಾಜ್ಯದೆಲ್ಲೆಡೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಒಂದೆರಡು ಸಲ ಅಂಗಡಿಗಳಿಗೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಆದರೆ ಇದೀಗ ಎಲ್ಲ ಕಡೆ ರಾಜಾರೋಷವಾಗಿ ಪ್ಲಾಸ್ಟಿಕ್ ಮಾರಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿಯ ಸಮಸ್ಯೆ ಬಿಗಡಾಯಿಸುತ್ತಿದೆ. ಪ್ಲಾಸ್ಟಿಕ್ ಉತ್ಪಾದನೆಯನ್ನು ಮೂಲದಲ್ಲೇ ನಿಯಂತ್ರಿಸದೆ ಇದ್ದರೆ ಸ್ವಚ್ಛತಾ ಅಭಿಯಾನ ಹೇಗೆ ಯಶಸ್ವಿಯಾಗಲು ಸಾಧ್ಯ  ಪ್ಲಾಸ್ಟಿಕ್ ಉತ್ಪಾದಕರು ಮತ್ತು ನಿಯಂತ್ರಣ ವ್ಯವಸ್ಥೆಗಳ ನಡುವೆ ಹೊಂದಾಣಿಕೆಯ ಸಂದೇಹ ಬರುತ್ತದೆ. ನಿಷೇಧವನ್ನು ಕೂಡಲೇ ಕಟ್ಟುನಿಟ್ಟಾಗಿ ಅನುಷ್ಠಾನ ಜಾರಿ ಮಾಡಲಿ

  • ಜೆ ಜೆ ಉಪಾಧ್ಯಾಯ  ಪುತ್ತೂರು