ವಸತಿ ಯೋಜನೆ ದುರುಪಯೋಗ ಬೇಡ

ಸರಕಾರ ವಸತಿ ಯೋಜನೆ ಕೆಲವು ಜನಾಂಗಗಳ ವಸತಿ ಹೀನರಿಗೆ ವಸತಿ ಒದಗಿಸಿಕೊಡಬೇಕೆಂಬ ಆಶಯ ಹೊಂದಿದೆ  ಕೆಲವು ಗ್ರಾಮ ಪಂಚಾಯತುಗಳಲ್ಲಿ ವಸತಿ ಮೀಸಲಾತಿಯಲ್ಲಿ ಎಷ್ಟು ಮನೆಗಳಿಗೆ ಬೇಡಿಕೆ ಇದೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡು ಬೇಡಿಕೆ ಅನುಸಾರವಾಗಿ ಗ್ರಾಮ ಪಂಚಾಯತಿಗೆ ಮನೆ ಗ್ರಾಂಟನ್ನು ನೀಡಬೇಕು  ಬೇಡಿಕೆ ಇಲ್ಲದ ಗ್ರಾಮ ಪಂಚಾಯತುಗಳಿಗೆ ಹೆಚ್ಚು ಮನೆಗಳನ್ನು ನೀಡಿದರೆ ದುರುಪಯೋಗ ಆಗುವ ಸಾಧ್ಯತೆ ಇದೆ  15-20 ವರ್ಷಗಳ ಹಿಂದೆ ಕಟ್ಟಿದ ಮನೆಗಳನ್ನು ಕೆಡವಿ ಮೀಸಲಾತಿಯಿಂದ ಬಂದ ಮನೆ ಗ್ರಾಂಟನ್ನು ಪಡೆದು ಮತ್ತೆ ಮನೆಗಳನ್ನು ಕಟ್ಟಿಸಿಕೊಳ್ಳುವುದರಿಂದ ಸರಕಾರ ನಿರೀಕ್ಷಿಸಿದಂತೆ ರಾಜ್ಯದಲ್ಲಿ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ  ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಕೆಡವಿ ಹೊಸದಾಗಿ ಮನೆಕಟ್ಟಿಕೊಂಡರೆ ಪರವಾಗಿಲ್ಲ  ಆದರೆ ಮನೆಗಳು ಭದ್ರತೆಯಿಂದ ಕೂಡಿದ್ದರೂ ಸಹ ಮನೆ ಕೆಡವಿ ಮನೆ ಕಟ್ಟಿಕೊಳ್ಳುವುದು ದುರುಪಯೋಗ ಮಾಡಿಕೊಂಡಂತೆ ಆಗುತ್ತದೆ  ಗ್ರಾಮ ಪಂಚಾಯತುಗಳಿಗೆ ಹೆಚ್ಚುವರಿ ಮನೆ ಗ್ರ್ಯಾಂಟ್ ಬಂದಾಗ ಫಲಾನುಭವಿಗಳು ಮನೆಗಳನ್ನು ಕೆಡವದೇ ಖಾಲಿ ನಿವೇಶನದಲ್ಲಿ ಹೊಸ ಮನೆ ಕಟ್ಟಿಕೊಂಡರೂ ಮುಂದೆ ಅದರ ಪ್ರಯೋಜನ ಆಗಬಹುದು. ಕೆಲವು ವರ್ಷಗಳ ಹಿಂದೆ ಕಟ್ಟಿದ ಮನೆಗಳನ್ನು ಕೆಡವಿ ಕಟ್ಟಿಕೊಳ್ಳುವುದನ್ನು ನಿಲ್ಲಿಸಬೇಕು  ಜನಪತ್ರಿನಿಧಿಗಳು ರಾಜಕಾರಣಿಗಳು ತಮ್ಮ ಆಪ್ತರಿಗೆ ಬೇಡಿಕೆ ಇಲ್ಲದಿದ್ದರೂ ಮನೆ ಟ ಗ್ರಾಂಟ್ ನೀಡುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕು. ಸರಕಾರದ ಯೋಜನೆ ಫಲಪದ್ರ ಆಗುವಂತೆ ನೋಡಿಕೊಳ್ಳಲಿ

  • ತೋಮಯ ಮೇಸ್ತ್ರಿ  ಅಜ್ಜರಕಾಡು-ಉಡುಪಿ