ಗೃಹಿಣಿಯ ಶವ ಬಾವಿಯಲ್ಲಿ ಪತ್ತೆ

ಮೃತ ಲಲಿತಾ ಭಟ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಗೃಹಿಣಿಯ ಶವ ಮನೆ ಬಳಿಯ ಅಡಿಕೆ ತೋಟದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ. ಕರಿಂಬಿಲ ಬನಾರಿ ನಿವಾಸಿ ಜಯರಾಮ ಭಟ್ ಪತ್ನಿ ಲಲಿತಾ ಭಟ್ (58) ಶವ ಬಾವಿಯಲ್ಲಿ ಸೋಮವಾರ ಮುಂಜಾನೆ ಕಂಡುಬಂದಿದೆ.
ಬೆಳಿಗ್ಗೆ ತೋಟಕ್ಕೆ ಹೋದವರು ಎಂಟು ಗಂಟೆಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ಮನೆಯವರು ನಡೆಸಿದ ತಪಾಸಣೆಯಲ್ಲಿ ಬಾವಿಯಲ್ಲಿ ಇವರನ್ನು ಪತ್ತೆಹಚ್ಚಲಾಗಿದೆ. ಕೂಡಲೇ ಸಮೀಪ ವಾಸಿಗಳು, ಮನೆಯವರು ಸೇರಿ ಬಾವಿಯಿಂದ ಶವ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಲಾಯಿತು. ಶವವನ್ನು ಜನರಲ್ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಬದಿಯಡ್ಕ ಪೊಲೀಸರು ದೂರು ದಾಖಲಿಸಿದ್ದಾರೆ