ಬಡ ಕುಟುಂಬಗಳಿಗೆ ಮನೆ ವಿತರಣೆ

ಮನೆ ಕೀಲಿ ಕೈ ಹಸ್ತಾಂತರಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಾಸರಗೋಡು ಚಿನ್ಮಯ ಮಿಶನ್ ವತಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಲಾದ ಮನೆ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ವಿದ್ಯಾನಗರ ಚಿನ್ಮಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಗಣ್ಯರ ಸಹಿತ ಹಲವರು ಪಾಲ್ಗೊಂಡರು.

ಮನೆ ಇಲ್ಲದ ಕುಟುಂಬಗಳನ್ನು ಗುರುತಿಸಿ ಚಿನ್ಮಯ ಮಿಶನ್ ವತಿಯಿಂದ ಮನೆಗಳನ್ನು ನಿರ್ಮಿಸಿ ವಿತರಿಸಲಾಗಿದೆ. ಕಾರ್ಯಕ್ರಮವನ್ನು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಚಿನ್ಮಯ ಮಿಶನ್ನಿನಂತಹ ಜೀವ ಕಾರುಣ್ಯ ಸೇವೆಗಳು ಇತರ ಸಂಘಟನೆಗಳಿಗೆ ಮದರಿಯಾಗಿದೆ. ಈಗಾಗಲೇ ಸ್ವಾಮಿ ಹೇಳಿದಂತೆ ಬಲಗೈಯಲ್ಲಿ ದಾನ ನೀಡಿದ್ದನ್ನು ಎಡ ಕೈಗೆ ಗೊತ್ತಾಗದ ರೀತಿಯಲ್ಲಿ ಹಲವು ಸೇವಾ ಚಟುವಟಿಕೆಗಳನ್ನು ಚಿನ್ಮಯ ಮಿಶನ್ ನಡೆಸಿಕೊಂಡು ಬಂದಿದೆ. ಇಂತಹ ಚಟುವಟಿಕೆಗಳು ಶ್ಲಾಘನೀಯ ಎಂದು ಹೇಳಿದರು.

ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್ ಬಡಕುಟುಂಬಗಳಿಗೆ ಮನೆಯ ಕೀಲಿ ಕೈ ಹಸ್ತಾಂತರಿಸಿದರು. ಮಾಜಿ ಶಾಸಕ ಸಿ ಎಚ್ ಕುಂಞಂಬು, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.