ಅಮೆರಿಕದಲ್ಲಿ ಭಾರತೀಯನ ಮನೆಗೆ ದುಷ್ಕರ್ಮಿಗಳ ದಾಳಿ

 ಕೊಲೆರೆಡೋ : ದಕ್ಷಿಣ ಕೊಲೆರೊಡೋದಲ್ಲಿ ವಾಸಿಸುತ್ತಿರುವ ಭಾರತೀಯ ವ್ಯಕ್ತಿಯೊಬ್ಬರ ಮನೆಗೆ ಮತೀಯವಾದಿಗಳು 50ರಷ್ಟು ಮೊಟ್ಟೆ ಎಸೆದು, ಮನೆಯೆದುರು ನಾಯಿ ಮಲ ಹಾಕಿ ಹೇಸಿಗೆಗೊಳಿಸಿರುಸಿರುವುದಲ್ಲದೆ, ಭಾರತೀಯನ ಬಗ್ಗೆ ಹೀಯಾಳಿಸುವ ಪ್ರಚಾರ ನಡೆಸಿದ ಘಟನೆಯೊಂದರ ಬಗ್ಗೆ ಫೆಡರಲ್ ತನಿಖಾ ತಂಡ (ಎಫ್‍ಬಿಐ) ತನಿಖೆ ಕೈಗೊಂಡಿದೆ.

ಭಾರತೀಯನ ಮನೆಯ ಸುತ್ತ ಅಪಮಾನ ಮಾಡುವಂತಹ ಸಂದೇಶಗಳು ಬಿದ್ದುಕೊಂಡಿವೆ ಎಂದು ಡೆನ್ವೇರ್ ಮಾಧ್ಯಮ ವರದಿ ಮಾಡಿದೆ.

ಮನೆಯ ಬಾಗಿಲು, ಕಿಟಕಿ ಮತ್ತು ಕಾರಿಗೆ ಸುಮಾರು 50 ಕಾಗದ ಹರಡಿಡಲಾಗಿತ್ತು. “ಭಾರತೀಯನಾದ ನೀವು ಇಲ್ಲಿರಬಾರದು” ಎಂದು ಮನೆಯ ಹೊರಗಡೆ ಬರೆದಿಡಲಾಗಿದೆ ಎಂದು ಮನೆಮಾಲಕ  ದೂರಿನಲ್ಲಿ ವಿವರಿಸಿದ್ದಾರೆ.