`ಹೌಸ್ ಆಫ್ ಹಾರರ್ಸ್’ ಪ್ರಕರಣ ….ದೆಹಲಿಯನ್ನು ಬೆಚ್ಚಿಬೀಳಿಸಿದ್ದ ಸರಣಿ ಕೊಲೆಗಳ ಆರೋಪಿ ಅಮಾಯಕನೇ ?

 

* ಗೀತಾ ಪಾಂಡೆ

ದೆಹಲಿಯ ಹೊರವಲಯದ ನೊಯ್ಡಾದಲ್ಲಿ ಕನಿಷ್ಠ 19 ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಕೊಲೆಯ ಘಟನೆಗಳು 10 ವರ್ಷಗಳ ಹಿಂದೆ ರಾಜಧಾನಿಯನ್ನು ವಸ್ತುಶಃ ನಡುಗಿಸಿತ್ತು.
ಈ ಕೊಲೆಗಳು ನಡೆದಿತ್ತೆನ್ನಲಾದ ಮನೆಯ ಒಡೆಯ, ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಮತ್ತಾತನ ಮನೆಯಾಳು ಸುರೀಂದರ್ ಕೊಹ್ಲಿಯನ್ನು ಬಂಧಿಸಲಾಗಿತ್ತು. ಕೊಹ್ಲಿ ಈ ಪ್ರಕರಣದಲ್ಲಿ ದೋಷಿಯೆಂದು ತೀರ್ಪು ಬಂದ ಆತನಿಗೆ ಮರಣದಂಡನೆ ಶಿಕ್ಷೆ ಘೋಷಿಸಲಾಗಿತ್ತು. ತರುವಾಯ ವಿಚಾರಣೆ ಮುಂದುವರಿಯುತ್ತಿದ್ದಂತೆಯೇ ಆರೋಪಿ ಉದ್ಯಮಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಈತನ್ಮಧ್ಯೆ ಇತ್ತೀಚೆಗೆ ನೆಟ್ ಫ್ಲಿಕ್ಸ್ ಮತ್ತಿತರ ಡಿಜಿಟಲ್ ಮಾಧ್ಯಮಗಳಲ್ಲಿ `ದಿ ಕರ್ಮ ಕಿಲ್ಲಿಂಗ್ಸ್’ ಎಂಬ ಹೆಸರಿನ ಸಾಕ್ಷ್ಯ ಚಿತ್ರ ಬಿಡುಗಡೆಗೊಂಡಿದ್ದು ಪಂಧೇರ್ ಈ ಪ್ರಕರಣದಲ್ಲಿ ತಪ್ಪಿತಸ್ಥನಾಗಿರಲಿಕ್ಕಿಲ್ಲ ಎಂದು ಸಾಧಿಸುವ ಪ್ರಯತ್ನವನ್ನು ಈ ಸಾಕ್ಷ್ಯಚಿತ್ರ ಮಾಡುತ್ತಿದೆ.
ಈ ಘಟನೆ ಡಿಸೆಂಬರ್ 2006ರಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಸಂದರ್ಭ ರಾಮ್ ದೇವಿನೇನಿ ಎಂಬ ಭಾರತೀಯ-ಅಮೆರಿಕನ್ ಚಿತ್ರ ನಿರ್ಮಾಪಕ ದೆಹಲಿಯಲ್ಲಿನ ತಮ್ಮ ಸಂಬಂಧಿಕರನ್ನು ಕಾಣಲು ಭಾರತಕ್ಕೆ ಬಂದಿದ್ದರು. ಅವರು ಈ ನಿಥಾರಿ ಕೊಲೆಗಳ ಸಂಬಂಧ ಸುಮಾರು ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ ಈ ಸಾಕ್ಷ್ಯ ಚಿತ್ರ ತಯಾರಿಸಿದ್ದಾರೆ.

ಮಕ್ಕಳ ನಾಪತ್ತೆ
ನಿಥಾರಿಯ ಕೊಳಚೆಪ್ರದೇಶಗಳಿಂದ ಹಲವರು ಮಕ್ಕಳು ನಿಗೂಢವಾಗಿ ಕಣ್ಮರೆಯಾಗುತ್ತಿದ್ದರೂ ಪೊಲೀಸರು ತಮ್ಮ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹಲವು ಸಮಯದಿಂದ ಸ್ಥಳೀಯರು ದೂರುತ್ತಿದ್ದರು. ಕೆಲ ಮಕ್ಕಳ ಅವಶೇಷಗಳು ಪಂಧೇರ್ ಮನೆ ಸಮೀಪದ ತೋಡಿನಲ್ಲಿ ಪತ್ತೆಯಾಗುತ್ತಿದ್ದಂತೆಯೇ ಪಂಧೇರ್ ಮಕ್ಕಳನ್ನು ತನ್ನ ಮನೆಗೆ ಆಹ್ವಾನಿಸಿ, ಸಿಹಿ ತಿಂಡಿ, ಚಾಕಲೇಟು ನೀಡಿ ಅವರನ್ನು ಸಂತೋಷಪಡಿಸಿ ತನ್ನ ಕಾರ್ಯ ಸಾಧಿಸುತ್ತಿದ್ದನೆಂದು ತಿಳಿದುಬಂದಿತ್ತು. ಆಕ್ರೋಶಿತ ಜನತೆ ಪೊಲೀಸ್ ಠಾಣೆಗೂ ದಾಳಿ ನಡೆಸಿತ್ತು.
ಆರಂಭದಲ್ಲಿ ಪಂಧೇರ್ ತಾನು ಮಕ್ಕಳ ಮೇಲೆ ಹಾಗೂ ಕೆಲವೊಮ್ಮೆ ಅವರ ಹೆಣಗಳ ಮೇಲೆ ಅತ್ಯಾಚಾರಗೈದ ಬಗ್ಗೆ ಹಾಗೂ ಒಮ್ಮೆ ಮಾನವ ಅಂಗಗಳನ್ನು ಬೇಯಿಸಿ ತಿನ್ನಲೆತ್ನಿಸಿದ್ದ ಬಗ್ಗೆ ಮೊದಲು ಒಪ್ಪಿಕೊಂಡಿದ್ದರೂ ನೀಡಿದ್ದರೂ ನಂತರ ತಾನೇನೂ ತಪ್ಪು ಮಾಡಿಲ್ಲ ಎಂದು ವಾದಿಸತೊಡಗಿದ್ದ.
ಪಂಧೇರ್ ಮನೆ `ಹೌಸ್ ಆಫ್ ಹಾರರ್ಸ್’ ಎಂದೂ ಕುಖ್ಯಾತಿ ಪಡೆದಿತ್ತು. ಪಂಧೇರ್ ಮತ್ತಾತನ ಆಳು ಇಬ್ಬರೂ ತಪ್ಪಿತಸ್ಥರು ಎಂಬ ಭಾವನೆಯೊಂದಿಗೇ ಈ ಪ್ರಕರಣದ ಅಧ್ಯಯನ ಕೈಗೆತ್ತಿಕೊಂಡ ದೇವಿನೇನಿ, ನಂತರ ತನ್ನ ಅಭಿಪ್ರಾಯ ಬದಲಿಸಬೇಕಾಗಿ ಬಂದಿತ್ತು. ಟ್ರೂಮನ್ ಕಪೋಟೆಯ `ಕೋಲ್ಡ್ ಬ್ಲಡ್’ನಿಂದ ಪ್ರೇರಿತವಾಗಿ ಹಲವಾರು ತಿಂಗಳು ನಿಥಾರಿಯಲ್ಲಿ ಕಳೆದು ಪೊಲೀಸರು, ವಕೀಲರು, ಸಂತ್ರಸ್ತರ ಕುಟುಂಬಗಳು ಹಾಗೂ ಆರೋಪಿಗಳನ್ನು ಭೇಟಿಯಾಗಿ ಮಾತನಾಡುತ್ತಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭ ಅವರೊಂದಿಗೆ ದೇವಿನೇನಿ ಮಾತನಾಡುತ್ತಿದ್ದರು. ಅವರಿಬ್ಬರಲ್ಲಿ ಕೊಹ್ಲಿ ಬಹಳ ಚಾಣಾಕ್ಷ, ಅಷ್ಟೊಂದೇನೂ ಶಿಕ್ಷಣವಿಲ್ಲದಿದ್ದರೂ, ಇಂಗ್ಲಿಷ್ ಜ್ಞಾನವಿಲ್ಲದೇ ಇದ್ದರೂ ಕಾನೂನನ್ನು ಮೆಟ್ಟಿ ಹೇಗೆ ಕಾರ್ಯ ಸಾಧಿಸಬಹುದೆಂಬುದನ್ನು ಚೆನ್ನಾಗಿ ಅರಿತಿದ್ದ. ದೇವಿನೇನಿ ಆತನಲ್ಲಿ ಮಾತನಾಡಿದಾಗ “ನಾನು ಈ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿಲ್ಲ, ಸಾಕ್ಷ್ಯಗಳನ್ನು ನೋಡಿ ಎಂದಿದ್ದ” ಎಂದು ಅವರು ನೆನಪಿಸುತ್ತಾರೆ.
ಪಂಧೇರ್ ಈ ಅಪರಾಧಗಳಲ್ಲಿ ಭಾಗಿಯಾಗಿಲ್ಲ ಎಂದು ಆರಂಭದಲ್ಲಿ ಕೊಹ್ಲಿ ಹೇಳಿದ್ದರೂ 2007ರಲ್ಲಿ ತನ್ನ ಹೇಳಿಕೆ ಬದಲಾಯಿಸಿದ್ದ. ಆತ ಅದೇಕೆ ಹಾಗೆ ಮಾಡಿದ ಎಂದು ತಿಳಿದಿಲ್ಲ. ತನ್ನ ಮನೆಯಲ್ಲಿಯೇ ನಡೆಯುತ್ತಿದ್ದ ವಿಷಯಗಳು ಅದು ಹೇಗೆ ಪಂಧೇರನಿಗೆ ತಿಳಿದಿರಲಿಲ್ಲವೆಂದು ಈ ಹಿಂದೆ ಹಲವರು ಪ್ರಶ್ನಿಸಿದ್ದರು.
ಪಂಧೇರಗೆ ಕೊಹ್ಲಿ ಮೇಲೆ ಅಪಾರವಾದ ಪ್ರೀತಿಯಿತ್ತು. ಆತ ಕರೆವೆಣ್ಣುಗಳನ್ನು ಭೇಟಿಯಾಗಲು ಹೋದಾಗಲೆಲ್ಲಾ ಕೊಲಿ ತನ್ನ ಪತ್ನಿಯೆದುರು ಗೌಪ್ಯತೆ ಕಾಪಾಡುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು. “ಪಂಧೇರ್ ಕೊಹ್ಲಿಯನ್ನು ಸಂಪೂರ್ಣವಾಗಿ ನಂಬಿಬಿಟ್ಟಿದ್ದನಲ್ಲದೆ ತನ್ನ ಮನೆಯ ಸಂಪೂರ್ಣ ಜವಾಬ್ದಾರಿ ಆತನಿಗೆ ವಹಿಸಿದ್ದ” ಎಂದು ದೇವಿನೇನಿ ಹೇಳುತ್ತಾರೆ.
“ಎಲ್ಲಾ ಕೊಲೆಗಳನ್ನೂ ಕೊಹ್ಲಿ ಒಬ್ಬನೇ ಮಾಡಿದ್ದಾನೆಂದು ನನಗೆ ನಂಬಿಕೆಯುಂಟಾಗಿದ. ಪಂಧೇರ್ ಒಬ್ಬ ನಿರಪರಾಧಿ” ಎನ್ನುತ್ತಾರವರು.
ಆದರೆ ದೇವಿನೇನಿ ವಾದವನ್ನು ಸಂತ್ರಸ್ತರ ಕುಟುಂಬಗಳು ಒಪ್ಪುವ ಸಾಧ್ಯತೆ ತೀರಾ ಕಡಿಮೆ. ಪಂಧೇರಗೆ ಗಲ್ಲು ಶಿಕ್ಷೆಯಾದರೆ ಮಾತ್ರ ತಮಗೆ ನ್ಯಾಯ ಸಿಕ್ಕಿದಂತೆ ಎಂದು ಅವರು ಹೇಳುತ್ತಾ ಬಂದಿದ್ದಾರೆ. “ಆದರೆ ಅವರಲ್ಲಿ ಯಾರು ಕೂಡ ಕೊಹ್ಲಿ ಬಗ್ಗೆ ತಿಳಿಯಲು ಪ್ರಯತ್ನಿಸಿಲ್ಲ. ಅವರ ಪ್ರಕಾರ ಕೊಹ್ಲಿ ತಮ್ಮ ಹಾಗೆಯೇ ಒಬ್ಬ ಬಡವ. ಪಂಧೇರ್ ಒಬ್ಬ ಶ್ರೀಮಂತನಾಗಿದ್ದರಿಂದ ಆತನನ್ನು ಬಿಟ್ಟು ಬಿಡಲಾಗಿದೆ. ಕೊಲೆ ಮಾಡಿದರೂ ದೊಡ್ಡ ವ್ಯಕ್ತಿ ಜೈಲಿನಿಂದ ಹೊರ ಬರಲು ಯಶಸ್ವಿಯಾಗಿದ್ದಾನೆ” ಎಂದು ಹೆಚ್ಚಿನವರು ತಿಳಿದಿದ್ದಾರೆ ಎಂಬುದು ದೇವಿನೇನಿ ಅಭಿಪ್ರಾಯ.