ಬೆಂಕಿ ತಗುಲಿ ಮನೆ ಭಸ್ಮ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಕಸ್ತೂರಬಾನಗರದ ಮನೆಯೊಂದರಲ್ಲಿ ಮಂಗಳವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ಎಲ್ಲ ಸಾಮಗ್ರಿ ಸುಟ್ಟು 2 ಲಕ್ಷ ರೂ ಮೀರಿ ನಷ್ಟವಾಗಿದೆ.

ರಿಕ್ಷಾ ಚಾಲಕ ಮಹಮದ್ ರಫೀಕ್ ಶೇಖರ್ ಮನೆಯಲ್ಲಿದ್ದ ಟೀವಿ, ಪಾತ್ರೆ, ಬಟ್ಟೆಗಳು, ಕಪಾಟು, ಎಲ್ಲ ದಾಖಲೆಗಳು, ಬಂಗಾರದ ಆಭರಣಗಳು ಹಾನಿಯಾಗಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿ ತಗಲಿರುವ ಅಂದಾಜಿದೆ. ಮನೆಯವರು ಹೊರಗೆ ಹೋದಾಗಲೇ ಬೆಂಕಿ ಅನಾಹುತ ಆಗಿದ್ದು, ತಕ್ಷಣ ಅಗ್ನಿಶಾಮಕ ದಳದವರಿಗೆ ಅಕ್ಕಪಕ್ಕದ ಮನೆಯವರು ಮಾಹಿತಿ ಕೊಟ್ಟರು. ರಸ್ತೆ ಇಕ್ಕಟ್ಟಿರುವುದರಿಂದ ಅಗ್ನಿಶಾಮಕ ದಳದವರು ಆಗಮಿಸಿದರೂ ಬೆಂಕಿ ನಂದಿಸಲು ದೂರದಿಂದ ಹರಸಾಹಸಪಡಬೇಕಾಯಿತು.