ಮನೆ ಬೆಂಕಿಗಾಹುತಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮಗಳ ಅಕಾಲಿಕ ನಿಧನದಿಂದ ಕಂಗೆಟ್ಟ ಕುಟುಂಬ ದುಃಖದಿಂದ ಚೇತರಿಸುವ ಮುನ್ನವೇ ಈ ಬಡ ಕುಟುಂಬದ ಮನೆ ಬೆಂಕಿಗಾಹುತಿಯಾಗಿದೆ.

ಕಿನ್ನಿಂಗಾರು ಬಳಿಯ ಮಾವಿನ ಹಿತ್ತಿಲು ನಿವಾಸಿ ದಿ ಚನಿಯ ಅವರ ಪತ್ನಿ ಮತ್ತು ಕುಟುಂಬ ವಾಸಿಸುತ್ತಿದ್ದ ಪುಟ್ಟ ಮನೆ ಫೆಬ್ರವರಿ 12ರಂದು ರಾತ್ರಿ ದೀಪದಿಂದ ಬೆಂಕಿ ಹರಡಿ ಮನೆ ಬೆಂಕಿಗಾಹುತಿಯಾಗಿದೆ. ಮನೆಯಲ್ಲಿದ್ದ ಬಟ್ಟೆಬರೆ, ಗುರುತುಚೀಟಿ ಸಹಿತ ದಾಖಲೆಪತ್ರಗಳು, ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ. ಕಮಲಾರ ಪುತ್ರಿ ಮಲ್ಲಿಕಾ ಜನವರಿ 23ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

LEAVE A REPLY