ಶಾರ್ಟ್ ಸಕ್ರ್ಯೂಟಿಂದ ಮನೆಗೆ ಬೆಂಕಿ

ಶಾರ್ಟ್ ಸಕ್ರ್ಯೂಟಿನಿಂದಾಗಿ ಮನೆ ಕರಕಲಾಗಿರುವುದು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮನೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತು ನಷ್ಟ ಉಂಟಾಗಿರುವ ಘಟನೆ ತೊಕ್ಕೊಟ್ಟು ಮಂಚಿಲದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಘಟನೆಗೆ ಶಾರ್ಟ್ ಸಕ್ರ್ಯೂಟ್ ಕಾರಣವೆಂದು ತಿಳಿದುಬಂದಿದೆ.

ಮಂಚಿಲದ ಗೀತಾ ಎಂಬವರ ಪೃಥ್ವಿ ನಿವಾಸದಲ್ಲಿ ಘಟನೆ ಸಂಭವಿಸಿದೆ. ಮನೆ ಮಂದಿ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭ ತೆಂಗಿನ ಗರಿ ವಿದ್ಯುತ್ ತಂತಿಗೆ ಬಿದ್ದಿತ್ತು. ಮನೆಯೊಳಗಿನ ಇಲೆಕ್ಟ್ರಾನಿಕ್ ಉಪಕರಣಗಳೆಲ್ಲವೂ ಬೆಂಕಿಗೆ ಆಹುತಿಯಾಗಿದೆ. ಮನೆಯೊಳಗಡೆ ಬೆಂಕಿ ಉರಿಯುತ್ತಿರುವುದನ್ನು ಕಂಡ ನೆರೆಕರೆಯ ನಿವಾಸಿ ಅಯೂಬ್ ಉಳ್ಳಾಲ್ ಮತ್ತು ಮೌರೀಸ್ ಮೊಂತೇರೊ ಎಂಬವರು  ಬಾಗಿಲು ಒಡೆದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಘಟನೆಯಿಂದ ರೂ 1 ಲಕ್ಷ ಸೊತ್ತು ನಷ್ಟ ಸಂಭವಿಸಿದೆ ಎನ್ನಲಾಗಿದೆ.