ಉಪ್ಪಿನಂಗಡಿಯಲ್ಲಿ ಮತ್ತೆ ಮನೆಗಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಕರಾಯ ಸರಕಾರಿ ಶಾಲಾ ಬಳಿ ಇರುವ ಮೈಮುನಾ ಎಂಬವರ ಮನೆಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿ ಆರು ಸಾವಿರ ನಗದು ಹಾಗೂ ಎರಡು ಪವನ್ ಚಿನ್ನದ ಬೆಂಡೋಲೆ ಕಳವುಗೈದು ಪರಾರಿಯಾಗಿದ್ದಾರೆ.

ಅಬ್ಬಾಸ್ ಎಂಬವರ ಮಗಳಾಗಿರುವ ಮೈಮುನಾ ಹೆರಿಗೆಯ ಕಾರಣಕ್ಕೆ ತವರು ಮನೆಯಲ್ಲಿದ್ದು, ತನ್ನ ಮನೆಗೆ ಬೀಗ ಹಾಕಿದ್ದರು. ಮನೆಯ ಚಿಲಕವನ್ನೇ ಕಿತ್ತು ಒಳನುಗ್ಗಿದ ಕಳ್ಳರು ಮನೆಯ ಕೋಣೆಗಳನೆಲ್ಲಾ ಜಾಲಾಡಿ, ಕಪಾಟಿನಲ್ಲಿದ್ದ 6 ಸಾವಿರ ನಗದು ಮತ್ತು 2 ಪವನ್ ತೂಕದ ಚಿನ್ನದ ಬೆಂಡೋಲೆಯನ್ನುಕದ್ದೊಯ್ದಿದ್ದಾರೆ. ಘಟನಾ ಸ್ಥಳದ ಸಮೀಪ ಕಾರು ಹಾಗೂ ಬೈಕ್ ಸಂಚರಿಸಿದ ಕುರುಹು ಇದ್ದು, ಕಳ್ಳರು ಬೈಕ್ ಹಾಗೂ ಕಾರಿನಲ್ಲಿ ಕಳ್ಳತನಕ್ಕೆ ಬಂದಿರುವ ಸಾಧ್ಯತೆಯನ್ನು ಅಂದಾಜಿಸುವುವಂತೆ ಮಾಡಿದೆ. ಶುಕ್ರವಾರ ರಾತ್ರಿ ಗ್ರಾಮದ ಸುರೇಶ್ ಎಂಬವರ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದ ಪ್ರಕರಣ ನಡೆದ ಬೆನ್ನಿಗೆಯೇ ಮತ್ತೊಂದು ಕಳವು ಪ್ರಕರಣ ನಡೆದಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ಗ್ರಾಮದಲ್ಲಿನ ನಿವೃತ್ತ ಯೋಧ ಪ್ರಸಕ್ತ ಉದ್ಯಮಿಯಾಗಿರುವ ಸುರೇಶರ ಮನೆಯಿಂದ ಭಾರೀ ಪ್ರಮಾಣದ ಚಿನ್ನಾಭರಣವನ್ನು ಕಳವು ಮಾಡಲಾದ ಪ್ರಕರಣದಲ್ಲಿ ಯಾವುದೇ ಸುಳಿವು ಲಭಿಸಿಲ್ಲ ಎನ್ನಲಾಗಿದೆ. ಕಳೆದ ಮೂರು ತಿಂಗಳಲ್ಲಿ ಸುರೇಶ್ ಮನೆಯಲ್ಲಿ ನಿರ್ಮಾಣ ಕಾರ್ಯದ ನೆಪದಲ್ಲಿ ಹಲವಾರು ಮಂದಿ ಕಾರ್ಮಿಕರು ಬಂದಿದ್ದು, ಈ ಪೈಕಿ ಯಾರಾದರೂ ಕಳ್ಳತನದ ಚಾಳಿಯವರಿರಬಹುದೇ ಎನ್ನುವುದೂ ಸೇರಿದಂತೆ ಹಲವಾರು ಸಂಶಯಗಳನ್ನಾಧರಿಸಿ ತನಿಖೆ ಮುಂದುವರೆದಿದೆ.