ಮನೆ ಬೀಗ ಮುರಿದು ನಗ, ನಗದು ಕಳವು

ಕಪಾಟನ್ನು ಮುರಿದಿರುವುದು ಹಾಗೂ ಮನೆಯೊಳಗೆ ಪತ್ತೆಯಾದ ಕತ್ತಿ.

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬೀಗ ಹಾಕಿದ ಮನೆಯೊಂದಕ್ಕೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮಲಗುವ ಕೊಠಡಿಯ ಕಪಾಟಿನಲ್ಲಿ ಇರಿಸಲಾಗಿದ್ದ ರೂ 45,000 ನಗದು ಹಾಗೂ ಸುಮಾರು 12 ಪವನಿನ ವಿವಿಧ ಚಿನ್ನದ ಒಡವೆಗಳನ್ನು ಕದ್ದೊಯಿದ್ದಾರೆ.

ಮುಂಭಾಗದ ಬಾಗಿಲು ಮುರಿದಿರುವುದನ್ನು ತೋರಿಸುತ್ತಿರುವುದು,

ಮೂಲತಃ ತೊಕ್ಕೋಟು ನಿವಾಸಿ ಹಾಗೂ ಇದೀಗ ಉದ್ಯಾವರ ಬಿ ಎಸ್ ನಗರದ ತಬ್ಲೀಗ್ ಮಸೀದಿಯ ಹಿಂಭಾಗದಲ್ಲಿ ವಾಸವಾಗಿರುವ ಉಸ್ಮಾನ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಯೂಸುಫ್ ಹಾಗೂ ಕುಟುಂಬಸ್ಥರು ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ 15 ದಿವಸಕ್ಕೆ ಮೊದಲು ತೊಕ್ಕೋಟಿನಲ್ಲಿರುವ ಕುಟುಂಬಸ್ಥರ ಮನೆಗೆ ತೆರಳಿದ್ದರು. ಆದರೂ ಮಂಗಳವಾರದಂದು ಉಸ್ಮಾನ್ ಮನೆಯ ಕಡೆ ಬಂದು ನೋಡಿ ಹೋಗಿದ್ದರು.

ಬುಧವಾರ ಬೆಳಿಗ್ಗೆ ನೆರೆಮನೆಯ ವ್ಯಕ್ತಿಯೊಬ್ಬರು ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಉಸ್ಮಾನ್ ಅವರಿಗೆ ಪೆÇೀನ್ ಮಾಡಿ ಮಾಹಿತಿ ನೀಡಿದ್ದಾರೆ. ಇದರಂತೆ ಆಗಮಿಸಿ ನೋಡುವಾಗ ಮನೆಯ ಮುಂಭಾಗದ ಹಾಗೂ ಒಳಗಿನ ಕೊಠಡಿಗಳ ಬಾಗಿಲುಗಳು ಮುರಿದ ಸ್ಥಿತಿಯಲ್ಲಿದವು. ಕಪಾಟನ್ನು ತೆರೆದು ಅದರೊಳಗಿದ್ದ ನಗ ಹಾಗೂ ನಗದನ್ನು ಕಳವುಗೈದಿರುವುದು ಗಮನಕ್ಕೆ ಬಂದಿದೆ. ಬಾಗಿಲು ಮುರಿಯಲು ಉಪಯೋಗಿಸಿರುವುದಾಗಿ ಶಂಕಿಸಲಾಗುತ್ತಿರುವ ಕತ್ತಿಯೊಂದು ಮನೆಯೊಳಗೆ ಪತ್ತೆಯಾಗಿದೆ. ಸ್ಥಳಕ್ಕೆ ಮಂಜೇಶ್ವರ ಪೆÇಲೀಸರು ಆಗಮಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ.