ಬಾಗಿಲು ಮುರಿದು ನಗ-ನಗದು ಕಳವು

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಪಟ್ಟಣದ ಅಲ್ವಾಸ್ಟ್ರೀಟಿನಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲು ಮರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ನಗದು ಹಾಗೂ ಚಿನ್ನವನ್ನು ದೋಚಿದ್ದಲ್ಲದೇ ಬೆಲೆಬಾಳುವ ಬಟ್ಟೆಗಳನ್ನೂ ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಕಳ್ಳತನ ನಡೆಸಲಾದ ಮನೆ ನೂರುಲ್ ಅಮೀನ್ ಎನ್ನುವವರಿಗೆ ಸೇರಿದ್ದಾಗಿದೆ. ಇವರು ಹಾಗೂ ಕುಟುಂಬದವರು ಮನೆಯಲ್ಲಿ ಇಲ್ಲದಿರುವ ಸಂದರ್ಭವನ್ನೇ ನೋಡಿಕೊಂಡ ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ 3 ಚಿನ್ನದ ನಾಣ್ಯ, 15,000 ನಗದು ಹಾಗೂ ಬೆಲೆಬಾಳುವ ಬಟ್ಟೆಗಳನ್ನೂ ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಕಳುವು ಮಾಡುವ ಸಂದರ್ಭದಲ್ಲಿ ಮನೆಯಲ್ಲಿನ ಬಟ್ಟೆ, ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮನೆಯವರು ವಾಪಸ್ ಮನೆಗೆ ಬಂದಾಗ ಕಳುವು ನಡೆದಿರುವುದು ಪತ್ತೆಯಾಗಿದ್ದು, ತಕ್ಷಣ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.