ಬಂಗಾರ, ನಗದು ಅಪಹರಣ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಮುಸ್ಲಿಂಗಲ್ಲಿ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಹಂಚು ತೆಗೆದು ಒಳಪ್ರವೇಶಿಸಿ ಸುಮಾರು 2 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ, 90,000 ರೂ ನಗದು ಕಳವು ಮಾಡಲಾಗಿದ್ದು, ರವಿವಾರ ನಗರ ಠಾಣೆಂiÀiಲ್ಲಿ ಪ್ರಕರಣ ದಾಖಲಾಗಿದೆ.

ಮುಸ್ಲಿಂಗಲ್ಲಿಯ ಬಿ ಬಿ ಆಯಿಷಾ ಇಮ್ರಾಮ ಸಾಬ ಮನೆಯಲ್ಲಿ ಕಳ್ಳತನ ಆಗಿದ್ದು, ಶನಿವಾರ ರಾತ್ರಿ ಕುಟುಂಬದವರು ಶಿರಸಿಯಲ್ಲಿರುವ ಅವರ ಮಗಳ ಮನೆಗೆ ಹೋಗಿದ್ದರು. ರಾತ್ರಿ ಅಲ್ಲಿ ಉಳಿದು ರವಿವಾರ ಬೆಳಿಗ್ಗೆ ಮನೆಗೆ ಬಂದಾಗ ಒಳಗೆ ಕಪಾಟು ತೆರೆದಿದ್ದು ಕಂಡುಬಂತು. ಕಪಾಟಿನಿಂದ 2 ಬಂಗಾರದ ಬಳೆ, 1 ಬಂಗಾರದ ಗುಂಡಿನ ಹಾರ, 2 ಕಿವಿ ಜುಮುಕಿ ಸಹಿತ ಒಟ್ಟೂ 81 ಗ್ರಾಂ ಬಂಗಾರ ಕಳ್ಳತನವಾಗಿದೆ. ಅದರ ಮೌಲ್ಯ ಅಂದಾಜು 2ರಿಂದ 2.10 ಲಕ್ಷ ರೂ ಎನ್ನಲಾಗಿದೆ. ನಗದು 90,000 ರೂ ಕಳವು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆರಳಚ್ಚು ತಂಡ ಆಗಮಿಸಿ ಪರಿಶೀಲಿಸಿದ್ದು, ನಗರ ಠಾಣೆಯಲ್ಲಿ ರವಿವಾರ ಸಂಜೆ ಪ್ರಕರಣ ದಾಖಲಾಗಿದೆ.

LEAVE A REPLY