ಕ್ಷೀರಸಾಗರ ಬಳಿ ಮನೆಗೆ ಕನ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಕ್ಷೀರಸಾಗರ ಕಾರು ಗ್ಯಾರೇಜ್ ಬಳಿಯ ಮನೆಯೊಂದರಲ್ಲಿ ಕಳವು ನಡೆದ ಬಗ್ಗೆ ವರದಿಯಾಗಿದೆ.
ಗುರುಪ್ರಸಾದ್ ಶೆಟ್ಟಿಗಾರ್ ಕುಟುಂಬ ಬೆಂಗಳೂರಲ್ಲಿ ನೆಲೆಸಿದ್ದು, ಅವರ ಪತ್ನಿಯ ತಂದೆ ಒಬ್ಬರೇ ಇಲ್ಲಿ ವಾಸವಿದ್ದು, ಸೋಮವಾರ ಅವರು ತನ್ನ ಪಡುಬಿದ್ರಿಯ ಮನೆಗೆ ತೆರಳಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿಕೊಂಡೇ ಕಳ್ಳರು ಮುಂಬಾಗಿಲ ಚಿಲಕವನ್ನು ಮುರಿದು ಒಳನುಗ್ಗಿ ಮಾಳಿಗೆ ಸಹಿತ ಎಲ್ಲಾ ಕೋಣೆಯನ್ನು ಜಾಲಾಡಿದ್ದು, ಮಹಡಿಯ ಕೋಣೆಯೊಂದರ ಕಪಾಟಿನಲ್ಲಿರಿಸಿದ್ದ 5 ಸಾವಿರ ನಗದನ್ನು ಮಾತ್ರ ದೋಚಿದ್ದಾರೆ. ಅದೇ ಕಪಾಟಲ್ಲಿ ಲಕೋಟೆಯೊಂದರಲ್ಲಿ 7 ಸಾವಿರ ನಗದು ಇರಿಸಿದ್ದು ಕಳ್ಳರ ಗಮನಕ್ಕೆ ಬಂದಿಲ್ಲ. ಅಲ್ಲೇ ಪಕ್ಕದ ಮನೆಯೊಂದರಲ್ಲಿ ಸೀಸಿಟೀವಿ ಇದ್ದು ಪರಿಶೀಲನೆ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ ಮುಲ್ಕಿ ಜನತೆಯ ಪಾಲಿಗೆ ಕರಾಳ ರಾತ್ರಿಯಾಗಿದ್ದು ಸರಣಿ ಕಳ್ಳತನ ನಾಗರಿಕರ ನಿದ್ದೆ ಕೆಡಿಸಿದೆ.