ಹೊಟೇಲಿನಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೈದ ರಿಸೆಪ್ಶನಿಸ್ಟ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಇಂಟರನ್ಯಾಷನಲ್ ಹೊಟೇಲ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬ ಕಟ್ಟಡದ 6ನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಂಪ್‍ವೆಲ್ ನಿವಾಸಿ ನಿಹಾಲ್ ಭಂಡಾರಿ (23) ಸಾವನ್ನಪ್ಪಿದಾತ.

ನಗರದ ಬಹಮಹಡಿಯ ಹೊಟೇಲಿನಲ್ಲಿ ಸ್ವಾಗತಕಾರನಾಗಿ ಕೆಲಸ ಮಾಡಿಕೊಂಡಿದ್ದ ಈತ ಕಳೆದ ಹಲವು ದಿನಗಳಿಂದ ಖಿನ್ನನಾಗಿದ್ದ. ನಿಹಾಲ್ ಕೆಲಸ ಮಾಡಿಕೊಂಡಿದ್ದ ಹೊಟೇಲ್‍ನ ಲೆಕ್ಕಪತ್ರಗಳಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದು,

ಈ ಹಿನ್ನೆಲೆಯಲ್ಲಿ ಮ್ಯಾನೇಜ್‍ಮೆಂಟ್ ಈತನನ್ನು ಕರೆದು ವಿಚಾರಣೆ ನಡೆಸಿತ್ತು. ಇದರಿಂದ ತೀವ್ರ ನೊಂದಿದ್ದ ನಿಹಾಲ್ ಆರನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

LEAVE A REPLY