ಅನ್ನ ಕೇಳಿದಕ್ಕೆ ಬಿಸಿ ನೀರು ಎರಚಿದ ಹೋಟೆಲ್ ಮಾಲಿಕ

ನಮ್ಮ ಪ್ರತಿನಿಧಿ ವರದಿ

ಕುಮಟಾ : ಇಲ್ಲಿನ ರೈಲ್ವೇ ಸೇತುವೆ ಸಮೀಪ ಹೋಟೆಲೊಂದರಲ್ಲಿ ಅನ್ನ, ಸಾರು ಕೇಳಲು ಹೋದವನಿಗೆ ಮಾಲಿಕ ಬಿಸಿನೀರು ಎರಚಿದ ಪರಿಣಾಮ ಮೈ ಸುಟ್ಟುಕೊಂಡಿದ್ದಾನೆ.

ಕಾಗಾಲ ಪೋಸ್ಟ್ ಆಫೀಸ್ ಸಮೀಪದ ನಿವಾಸಿ ಸುರೇಶ ರಾಮಾ ನಾಯ್ಕ ಮೈ ಸುಟ್ಟುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬುಧವಾರ ಬೆಳಿಗ್ಗೆ ಇದನ್ನು ಗಮನಿಸಿದ ನೂತನ ಬಸ್ ನಿಲ್ದಾಣದ ಆಟೋ ಚಾಲಕರು ಆವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ವ್ಯಕ್ತಿ ಹಣ ನೀಡಿ ಊಟ ಕೇಳಿದರೂ ಹೋಟೆಲ್ ಮಾಲಿಕರು ಈ ರೀತಿ ವರ್ತಿಸಿರುವುದಕ್ಕೆ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ.