ಡಾಬೂ ರತ್ನಾನಿ ಕ್ಯಾಲೆಂಡರಿನಲ್ಲಿ ಹಾಟ್ ಗಲ್ರ್ಸ್

ಡಾಬೂ ರತ್ನಾನಿ ಕ್ಯಾಲೆಂಡರಿನಲ್ಲಿ ಕಾಣಿಸಿಕೊಳ್ಳುವುದೆಂದರೆ ಬಾಲಿವುಡ್ ಬೆಡಗಿಯರಿಗೆ ಎಲ್ಲಿಲ್ಲದ ಖುಶಿ. ಎಲ್ಲರಿಗೂ ಹಾಟ್ ಆಗಿ ಕಾಣಿಸಿಕೊಳ್ಳುವ ಬಯಕೆ. ಈ ವರ್ಷದ ಕ್ಯಾಲೆಂಡರಿನಲ್ಲಂತೂ ಐಶ್ವರ್ಯಾ ರೈ ಬಚ್ಚನ್ ಹಿಡಿದು ಆಲಿಯಾ ಭಟ್‍ವರೆಗೆ ಹಲವು ಟಾಪ್ ಹೀರೋಯಿನ್ಸ್ ತಮ್ಮ ಸೌಂದರ್ಯ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ನೀರಿನಲ್ಲಿ ಟಾಪ್‍ಲೆಸ್‍ನಲ್ಲಿ ಕಾಣಿಸಿಕೊಂಡಿದ್ದಾಳೆ. ದಿಶಾ ಪಟಾನಿ ಕೂಡಾ ಟಾಪ್ ಧರಿಸದೇ ತನ್ನ ಕೂದಲಿನಿಂದಲೇ ತನ್ನ ಸೌಂದರ್ಯ ಮುಚ್ಚಿಟ್ಟು ಪಡ್ಡೆಗಳಿಗೆ ಕಿಚ್ಚು ಹಚ್ಚಿದ್ದಾಳೆ. ಸನ್ನಿ ಲಿಯೋನ್ ಅಂತೂ ತನ್ನ ತೆರೆದ ದೇಹದ ಮೇಲೊಂದು ಕೋಟು ಸುಮ್ಮನೇ ಸ್ಟೈಲಿಗೆ ಹಾಕಿಕೊಂಡು ಫೋಸ್ ನೀಡಿದ್ದಾಳೆ.


ಇವರಷ್ಟೇ ಅಲ್ಲದೇ ಅನುಷ್ಕಾ ಶರ್ಮಾ, ಶ್ರದ್ಧಾ ಕಪೂರ್, ಕೃತಿ ಸನನ್, ವಿದ್ಯಾ ಬಾಲನ್ ಪರಿಣೀತಿ ಚೋಪ್ರಾ, ಪ್ರಿಯಾಂಕಾ ಚೋಪ್ರಾರೂ ವಿಭಿನ್ನ ಫೋಸಿನಲ್ಲಿ ಹಾಟ್ ಲುಕ್ ನೀಡಿದ್ದಾರೆ.
ಈ ಕ್ಯಾಲೆಂಡರಿನಲ್ಲಿ ವರುಣ್ ಧಾವನ್, ರಣವೀರ್ ಸಿಂಗ್, ಹೃತಿಕ್ ರೋಷನ್, ಅಕ್ಷಯ್ ಕುಮಾರ್ ಹಾಗೂ ಇನ್ನೂ ಕೆಲವು ನಟರು ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ.