ಆಸ್ಪತ್ರೆ ಸ್ವಚ್ಛಗೊಳಿಸಿದ ಎನ್ನೆಸ್ಸೆಸ್ ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು ಎಲ್ ಬಿ ಎಸ್ ಇಂಜಿನಿಯರಿಂಗ್ ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಗೂ ಪುನರ್ ಜನಿ ಸಂಘಟನೆಯ ಕಾರ್ಯಕರ್ತರ ಸಹಯೋಗದೊಂದಿಗೆ ಸರಕಾರಿ ಆಸ್ಪತ್ರೆ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಈ ತಿಂಗಳ 30ರ ತನಕ ಈ ಸ್ವಚ್ಛ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮವನ್ನು ಕೇರಳ ರಾಜ್ಯ ಕಂದಾಯ ಸಚಿವ ಇ ಚಂದ್ರಶೇಖರ್ ಉದ್ಘಾಟಿಸಿದರು. ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು.

ಮಂಗಳವಾರದಿಂದ ಶುಕ್ರವಾರ ತನಕ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂವಾದ ಹಾಗೂ ಕಿರು ಸಿನಿಮಾ ಪ್ರದರ್ಶನಗೊಳ್ಳಲಿದೆ.

ಶುಕ್ರವಾರ ಸಮಾರೋಪ ಕಾರ್ಯಕ್ರಮ ನಡೆಯಲಿದೆ.