ಹೊಸಂಗಡಿ ಯುವ ಕಾಂಗ್ರೆಸ್ ಪ್ರತಿಭಟನೆ

ಸುಹೈಬ್ ಬರ್ಬರ ಕೊಲೆ

ಮಂಜೇಶ್ವರ : ಕಣ್ಣೂರು ಯುವ ಕಾಂಗೈ ನೇತಾರ ಸುಹೈಬರನ್ನು ಬಾಂಬೆಸೆದು, ತಲವಾರಿನಿಂದ ಕೊಚ್ಚಿ ಕೊಲೆಗೈದ ಸಿಪಿಎಂ ತಾಲಿಬಾನಿ ಕೃತ್ಯವನ್ನು ಖಂಡಿಸಿ ಮಂಜೇಶ್ವರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್ ಮಾತನಾಡಿ, “ ಕೇರಳದಲ್ಲಿ ಎಡರಂಗದ ಆಡಳಿತದಲ್ಲಿ ನರಬೇಟೆ ಹೆಚ್ಚಾಗುತ್ತಿದ್ದು, ಕ್ರಿಮಿನಲ್ ಹಿನ್ನೆಲೆಯುಳ್ಳ ಮುಖ್ಯಮಂತ್ರಿ ಇದಕ್ಕೆ ನೇತೃತ್ವ ನೀಡುತ್ತಿದ್ದಾರೆ” ಎಂದು ಅವರು ಆರೋಪಿಸಿದರು. ನೇತಾರರ ಸಹಿತ ಹಲವಾರು ಮಂದಿ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

LEAVE A REPLY