ಬೈಕಂಪಾಡಿ ಕೈಗಾರಿಕಾ ಪಟ್ಟಣಕ್ಕೆ ಮನಪಾ ನಿರಪೇಕ್ಷಣಾ ಪತ್ರ ನಿರೀಕ್ಷೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೈಕಂಪಾಡಿ ಕೈಗಾರಿಕಾ ಪಟ್ಟಣ ಪ್ರಾಧಿಕಾರದ ಬಗ್ಗೆ ಉದ್ಯಮಿಗಳು ಬಲವಾದ ಭರವಸೆ ಇಟ್ಟುಕೊಂಡಿದ್ದು, ಮಂಗಳೂರು ಮಹಾನಗರಪಾಲಿಕೆಯ ನಿರಪೇಕ್ಷಣಾ ಪತ್ರಕ್ಕಾಗಿ ಇದಿರು ನೋಡುತ್ತಿದ್ದಾರೆ.

ಪ್ರಸ್ತಾವಿತ ಯೋಜನೆಯಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಕೈಗಾರಿಕಾ ಪಟ್ಟಣ ಪ್ರಾಧಿಕಾರಕ್ಕೆ ಕೈಗಾರಿಕಾ ಪ್ರದೇಶದ ವ್ಯಾಪ್ತಿಯನ್ನು ನಿರ್ವಹಿಸುವ ಅಧಿಕಾರವನ್ನು  ಮಹಾನಗರ ಪಾಲಿಕೆ ಬಿಟ್ಟುಕೊಡಬೇಕು. ಮಹಾನಗರ ಪಾಲಿಕೆಯ ಗ್ರೀನ್‍ಸಿಗ್ನಲ್ ನಿರೀಕ್ಷೆಯಲ್ಲಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳು, ಪ್ರಾಧಿಕಾರ ತಕ್ಷಣ ಕಾರ್ಯಾಚರಣೆ ಆರಂಭಿಸಬೇಕು ಎನ್ನುತ್ತಿದ್ದಾರೆ.

ನೂತನ ಕೈಗಾರಿಕಾ ಪಟ್ಟಣ ಪ್ರಾಧಿಕಾರವನ್ನು ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ ಅಥಾರಿಟಿ ಮಾದರಿಯಲ್ಲಿ ರಚಿಸುವ ನಿರೀಕ್ಷೆಯಲ್ಲಿದ್ದು, ಈ ಪ್ರಸ್ತಾವನೆ ಕಳೆದ ನಾಲ್ಕು ದಶಕಗಳಿಂದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ನಿರ್ಮಾಣಕ್ಕಾಗಿ ಹೋರಾಡುತ್ತಿರುವ ಕೈಗಾರಿಕೋದ್ಯಮಿಗಳ ಆಸಕ್ತಿಯನ್ನು ಇನ್ನಷ್ಟು ಪ್ರಚೋದಿಸಿದೆ.

 ಮೂಲಸೌಕರ್ಯಗಳ ಅಭಿವೃದ್ದಿ

“ಪ್ರಾಧಿಕಾರದ ಮೂಲ ಆದ್ಯತೆ ಮೂಲಭೂತ ಸೌಕರ್ಯಗಳ ಬಲಪಡಿಸುವುದಾಗಿದ್ದು, ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಪ್ರಕಾರ ಪ್ರಸ್ತಾವಿತ ಪ್ರಾಧಿಕಾರದ ಮಹತ್ವದ ಯೋಜನೆ ಬೈಕಂಪಾಡಿಯಲ್ಲಿ ಉದ್ಯಮಗಳ ಅಂಬ್ರೆಲ್ಲಾ ಸಂಘಟನೆಯಾಗಿದೆ. ಮನಪಾ ಆಕ್ಷೇಪಣಾ ರಹಿತ ಪತ್ರ ನೀಡಿದರೆ, ಪ್ರಸ್ತಾವಿತ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಸೌಲಭ್ಯಗಳು ಅಭಿವೃದ್ದಿಗೊಳ್ಳಲಿದೆ” ಎಂದು ಸಂಘದ ಉಪಾಧ್ಯಕ್ಷ ಗೌರವ್ ಹೆಗ್ಡೆ ಹೇಳಿದ್ದಾರೆ.