ಉತ್ತರ ಠಾಣೆಗೆ ಗೃಹ ಸಚಿವ ಹಠಾತ್ ಭೇಟಿ

ಮಂಗಳೂರು : ಗೃಹ ಸಚಿವ ಪರಮೇಶ್ವರ್ ಅವರು ಇತ್ತೀಚೆಗೆ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ ಮೇಲೆ ಬೆಳ್ಳಂಬೆಳಗ್ಗೆ ನಗರದ ಬಂದರು ಯಾನೆ ಉತ್ತರ ಪೆÇಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿರುವುದು ತಡವಾಗಿ ಸುದ್ದಿಯಾಗಿದೆ.
ಬೆಳಗ್ಗೆ ಗಂಟೆ ಏಳೂವರೆ ಸುಮಾರಿಗೆ ಖಾಸಗಿ ಕಾರೊಂದರಲ್ಲಿ ಬಂದರು ಠಾಣೆಗೆ ದೀಢೀರ್ ಭೇಟಿ ನೀಡಿದಾಗ ಠಾಣೆಯಲ್ಲಿ ಠಾಣಾಧಿಕಾರಿ ಮತ್ತು ಸೆಂಟ್ರಿ ಮಾತ್ರ ಇದ್ದರು. ಅನಂತರ ಮಾಹಿತಿ ಪಡೆದ ಬಂದರು ಠಾಣೆಯ ಇನ್ಸಪೆಕ್ಟರ್ ಶಾಂತರಾಮ್ ಮತ್ತು ನಗರ ಪೆÇಲೀಸ್ ಕಮೀಷನರೇಟಿನ ಡಿಸಿಪಿ ಶಾಂತರಾಜು ಹಾಗೂ ಇತರ ಸಿಬ್ಬಂದಿ ಠಾಣೆಗೆ ಆಗಮಿಸಿದರು.
ಬಂದರು ಠಾಣೆಯ ಸುತ್ತಮುತ್ತ ಇರಿಸಲಾಗಿರುವ ವಶಪಡಿಸಿಕೊಳ್ಳಲಾದ ವಾಹನ ಮತ್ತು ಇತರ ಸೊತ್ತುಗಳನ್ನು ವಿಲೇ ಮಾಡುವಂತೆ ಗೃಹ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಾವುದೇ ತನಿಖಾ ಫೈಲುಗಳನ್ನು ಮತ್ತು ಇತರ ಫೈಲುಗಳನ್ನು ವಿಳಂಬ ಮಾಡದೆ ತನಿಖೆ ಪೂರೈಸುವಂತೆ ಸಚಿವರು ಅಧಿಕಾರಿಗಳು ತಿಳಿಸಿದರು. ಪ್ರಸಕ್ತ ವರ್ಷ ಅಪರಾಧ ಪ್ರಕರಣಗಳು ಇಳಿಮುಖ ಆಗಿರುವ ಮಾಹಿತಿಯನ್ನು ಅಧಿಕಾರಿಗಳು ಸಚಿವರಿಗೆ ನೀಡಿದರು.
ಸುಮಾರು ಆರ್ಥ ಗಂಟೆ ಠಾಣೆಯಲ್ಲಿದ್ದ ಗೃಹ ಸಚಿವ ಪರಮೇಶ್ವರ್ ಠಾಣಾ ವ್ಯಾಪ್ತಿಯಲ್ಲಿ ಪೆÇಲೀಸ್ ಗಸ್ತು ವ್ಯವಸ್ಥೆ, ಸಮನ್ಸ್ ವಿತರಣೆ, ತನಿಖಾ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಠಾಣೆಯಲ್ಲಿ ಎಪ್ಪತ್ತಿಕ್ಕಿಂತಲೂ ಹೆಚ್ಚು ಸಿಬ್ಬಂದಿ ನಿಯೋಜನೆ ಆಗಬೇಕಾಗಿದ್ದರೂ, ಇಪ್ಪತ್ತೈದಕ್ಕಿಂತ ಹೆಚ್ಚು ಮಂದಿ ಸಿಬ್ಬಂದಿ ಕೊರತೆ ಇರುವುದನ್ನು ಪೆÇಲೀಸ್ ಇನ್ಸಪೆಕ್ಟರ್ ಸಚಿವರ ಗಮನಕ್ಕೆ ತಂದರು. ಬಂದರು ಠಾಣೆ ನಗರದ ಅತ್ಯಂತ ಹಳೆಯ ಪೆÇಲೀಸ್ ಆಗಿದ್ದು, ಹಳೆಯ ಕಾಲದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪರಮೇಶ್ವರ್ ಅವರು ಗೃಹ ಸಚಿವರಾದ ಅನಂತರ ಕೆಲವು ಪೆÇಲೀಸ್ ಠಾಣೆಗಳಿಗೆ ದೀಢೀರ್ ಭೇಟಿ ನೀಡುವ ಮೂಲಕ ಪೆÇಲೀಸ್ ಇಲಾಖೆಯ ಕಾರ್ಯವೈಖರಿಗೆ ಚುರುಕು ಮುಟ್ಟಿಸಿದ್ದಾರೆ. ಸಚಿವರು ಪೆÇಲೀಸ್ ಠಾಣೆಗೆ ಭೇಟಿ ನೀಡಿರುವುದು ಪೆÇಲೀಸರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಗಮನಕ್ಕೆ ಬಂದಿರಲಿಲ್ಲ.