ತೆನೆಹಬ್ಬ ಆಚರಿಸಲು ರಜೆ ಆದೇಶಿಸಿರುವುದು ಸ್ವಾಗತಾರ್ಹ

ಕ್ರಿಶ್ಚಿಯನ್ ಬಾಂಧವರೆಲ್ಲ ಸೆಪ್ಟೆಂಬರ್ 8ರಂದು ಸಂಭ್ರಮದಿಂದ ಆಚರಿಸುವ ತೆನೆ ಹಬ್ಬ (ಮೊಂತಿ ಫೆಸ್ಟ್)ಕ್ಕೆ ಸಾರ್ವತ್ರಿಕ ರಜೆ ದಯಪಾಲಿಸಬೇಕೆಂದು ಮನವಿಯನ್ನು ಸರಕಾರಕ್ಕೆ ಸಲ್ಲಿಸಿದರೂ ಇದರ ಬಗ್ಗೆ ಸರಕಾರ ಹೆಚ್ಚೇನು ತಲೆ ಕೆಡಿಸಲಿಲ್ಲ. ಆದರೆ 2017ನೇ ಸಾಲಿನ ಪರಿಮಿತ ರಜೆಗಳ ಪಟ್ಟಿಯಲ್ಲಿ ಮೊಂತಿ ಫೆಸ್ಟ್ ಸಹ ಸೇರಿಸಲಾಗಿದೆ. ಅಲ್ಲದೆ ಹುತ್ತರಿ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡದೆ ಮೊಂತಿ ಫೆಸ್ಟ್ (ಕುರಾಲ್ ಹಬ್ಬ)ನಂತೆ ಪರಿಮಿತ ರಜೆ ಘೋಷಿಸಿರುವ ಆದೇಶ ಕ್ರೈಸ್ತ ಬಾಂಧವರಿಗೆ ಸಂತಸದ ಸುದ್ದಿ. ಸರಕಾರ ಹಬ್ಬ ಆಚರಣೆ ಸಲುವಾಗಿ ತಾರತಮ್ಯ ತೋರದೆ, ಅನ್ಯಾಯ ಮಾಡದೆ ನಮ್ಮ ಹುತ್ತರಿ ಹಾಗೂ ತೆನೆ ಹಬ್ಬಕ್ಕೆ ಪರಿಮಿತ ರಜೆ ನೀಡಿರುವ ಕ್ರಮ ಸ್ವಾಗತಾರ್ಹ ಹಾಗೂ ಸರಿಯಾದ ಕ್ರಮ.

  • ಜೆ ಎಫ್ ಡಿಸೋಜ ಅತ್ತಾವರ