ಬಂಡೆಗಲ್ಲು ಬಿದ್ದು ಸಾವು

ಸಾಂದರ್ಭಿಕ ಚಿತ್ರ

ಮಂಗಳೂರು: ಬಂಡೆ ಕಲ್ಲೊಂದು ಹಿಟಾಚಿ ಮೇಲೆ ಬಿದ್ದ ಪರಿಣಾಮ ಆಪರೇಟರ್ ಮೂಲತಃ ಅಸ್ಸಾಂ ಕಪ್ತನಪುರದ ಅಪ್ಪು ಮಿನ್ ಲಕ್ರ್ಸ್ (22) ಸಾವನ್ನಪ್ಪಿದ್ದಾರೆ. ಬಜಪೆ ಅಡ್ಡೂರಿನಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ದುರಂತ ನಡೆಯಿತು. ಅಡ್ಡೂರಿನ ಸಹರಾ ಶಾಲೆ ಸಮೀಪ ಗುಡ್ಡವೊಂದನ್ನು ಅಪ್ಪು ಮಿನ್ ಹಿಟಾಚಿಯಲ್ಲಿ ಕೊರೆಯುತ್ತಿದ್ದರು. ಈ ಸಂದರ್ಭ ಮೇಲ್ಭಾಗದಿಂದ ಭಾರೀ ಬಂಡೆಯೊಂದು ಉರುಳಿ ಹಿಟಾಚಿ ಮೇಲೆ ಬಿದ್ದಿದೆ.

 

LEAVE A REPLY