ಆಫ್ರಿಕ ವಿರುದ್ಧ ಇಂಡಿಯಾಕ್ಕೆ ಐತಿಹಾಸಿಕ ಸರಣಿ ಗೆಲುವು

  • ಎಸ್ ಜಗದೀಶ್ಚಂದ್ರ ಅಂಚನ್

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತೊಂದು ಐತಿಹಾಸಿಕ ಸರಣಿ ಗೆಲುವು ಪಡೆದುಕೊಂಡಿದೆ. ಈವರೆಗೂ ಸಾಕಷ್ಟು ದಾಖಲೆ ನಿರ್ಮಿಸಿರುವ ಕೊಹ್ಲಿ ಪಡೆ ಈಗ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿ ಏಕದಿನ ಸರಣಿಯೊಂದನ್ನು ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆಯ ಕನಸನ್ನು  ನನಸಾಗಿದೆ.

ಆರಂಭಿಕ ದಾಂಡಿಗ ರೋಹಿತ್ ಶರ್ಮ  ಬಾರಿಸಿದ ಮನಮೋಹಕ ಶತಕದ ನಂತರ ಬೌಲರ್ ಗಳು ತೋರಿದ ಸಂಘಟಿತ ಬೌಲಿಂಗ್ ಬಲದಿಂದ ಟೀಂ ಇಂಡಿಯಾ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 73 ರನ್ ಗಳಿಂದ ಜಯ ಗಳಿಸಿದೆ. ಈ ಮೂಲಕ ಆರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ 4-1ರ ಮುನ್ನಡೆಯ ಹೆಜ್ಜೆಯನ್ನಿಟ್ಟಿದೆ.

ರೋಹಿತ್ ಶತಕ :  ಟಾಸ್ ಸೋತ ಟೀಂ ಇಂಡಿಯಾ  ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿತು. ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಆರಂಭಿಕ ಜೋಡಿ ಮೊದಲ ವಿಕೆಟಿಗೆ 48 ರನ್  ಸೇರಿದ ಬಳಿಕವೇ ಬೇರ್ಪಟ್ಟಿತು.

ರೋಹಿತ್ ಶರ್ಮ ಆಫ್ರಿಕನ್ ಬೌಲರುಗಳನ್ನು ನಿರಾಯಾಸವಾಗಿ ದಂಡಿಸಿದರು. ಅವರು 107 ಎಸೆತಗಳಲ್ಲಿ ಶತಕ ದಾಖಲಿಸಿಕೊಂಡರು. ಅವರು ವೇಗಿ ಲುಂಗಿಸಾನಿ ಗಿಡಿ ಅವರಿಗೆ ವಿಕೆಟ್ ಒಪ್ಪಿಸಿದ ಹೊತ್ತಿನಲ್ಲಿ 126 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಇದ್ದ 115 ರನ್ ಬಾರಿಸಿದರು. ಇದು ರೋಹಿತ್  ಶರ್ಮ ಏಕದಿನ ಕ್ರಿಕೆಟಿನಲ್ಲಿ ಬಾರಿಸಿದ 17 ನೇ ಶತಕವಾಗಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಸತತ ವೈಫಲ್ಯದ ಬಳಿಕ ಪುಟಿದೆದ್ದ ರೋಹಿತ್ ಶರ್ಮ  ಈ ಪಂದ್ಯದಲ್ಲಿ ಭರ್ಜರಿ ಶತಕದ ಮೂಲಕ ಸಂಭ್ರಮಿಸಿ ಅಭಿಮಾನಿ ಗಳನ್ನು ಖುಷಿ ಪಡಿಸಿದರು.

ಪೆÇೀರ್ಟ್ ಎಲಿಜಬೆತ್ ಕ್ರೀಡಾಂಗಣದಲ್ಲಿ ಈ ಮೊದಲು ನಡೆದ ನಾಲ್ಕು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲನ್ನು ಕಂಡಿತ್ತು. ಆದರೆ, ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಆತಿಥೇಯರ ಅಜೇಯ ದಾಖಲೆಯನ್ನು ಮುರಿದಿದೆ.

 

LEAVE A REPLY